July 9, 2026
Thursday, July 9, 2026
spot_img

‘ಮಹಾ’ ಮಳೆಗೆ ಬೆಚ್ಚಿಬಿದ್ದಿದೆ ಗಡಿಭಾಗ: ಕೃಷ್ಣಾ ನದಿಯಲ್ಲಿ ಹೆಚ್ಚುತ್ತಿದೆ ನೆರೆ, ಪ್ರವಾಹದ ಆತಂಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಕೃಷ್ಣಾ ನದಿಯ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದರ ನೇರ ಪರಿಣಾಮ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮೇಲಾಗಿದ್ದು, ಕುಡಚಿ ಮತ್ತು ಉಗಾರಖುರ್ದ್ ಗ್ರಾಮಗಳನ್ನು ಬೆಸೆಯುವ ಪ್ರಮುಖ ಸೇತುವೆ ಇದೀಗ ಮುಳುಗಡೆಯ ಅಂಚಿನಲ್ಲಿದೆ.

ಸಂಚಾರಕ್ಕೆ ತಡೆ, ಪೊಲೀಸರ ಹದ್ದಿನ ಕಣ್ಣು

ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವಿನ ಆರ್ಥಿಕ ಕೊಂಡಿಯಂತಿರುವ ಈ ರಸ್ತೆಯ ಮೇಲೆಯೇ ಸದ್ಯ ಒಂದು ಅಡಿಯಷ್ಟು ನೀರು ಹರಿಯುತ್ತಿದೆ. ಸದ್ಯಕ್ಕೆ ದ್ವಿಚಕ್ರ ಹಾಗೂ ಕಾರುಗಳ ಸಂಚಾರ ಮಾತ್ರವೇ ಇದ್ದು, ಪ್ರವಾಹ ಹೆಚ್ಚಾದರೆ ಸಂಪೂರ್ಣ ರಸ್ತೆ ಬಂದ್ ಮಾಡಲು ಸಾರಿಗೆ ಮತ್ತು ಪೊಲೀಸ್ ಇಲಾಖೆ ಬ್ಯಾರಿಕೇಡ್‌ಗಳೊಂದಿಗೆ ಸನ್ನದ್ಧವಾಗಿದೆ. ಸಾರ್ವಜನಿಕರು ಬದಲಿ ಮಾರ್ಗ ಬಳಸದಿದ್ದರೆ ಸುಮಾರು 50 ಕಿಲೋಮೀಟರ್‌ಗಳಷ್ಟು ಹೆಚ್ಚುವರಿ ಪ್ರಯಾಣ ಮಾಡಬೇಕಾಗುತ್ತದೆ.

8 ಕೆಳಹಂತದ ಸೇತುವೆಗಳು ಜಲಾವೃತ

ನದಿಗೆ ಸದ್ಯ 1.40 ಲಕ್ಷ ಕ್ಯೂಸೆಕ್ ಮಹಾಪೂರ ಹರಿದುಬರುತ್ತಿದ್ದು, ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 8 ರಸ್ತೆ ಸಂಪರ್ಕದ ಕೆಳಹಂತದ ಬ್ಯಾರೇಜ್‌ಗಳು ಈಗಾಗಲೇ ಮುಳುಗಿ ಹೋಗಿವೆ. ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಮುನ್ನವೇ ಗಡಿಭಾಗದ ಜನರು ಜಾಗರೂಕರಾಗಿರಲು ಸೂಚಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !