ಓಡೋಡಿ ಬಂದು ಅಂಪೈರ್‌ ಪ್ಯಾಂಟ್‌ ಎಳೆದ ಬೌಲರ್:‌ ನಕ್ಕು ನಕ್ಕು ಸುಸ್ತಾದ ಆಟಗಾರರು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಟದ ಎಲ್ಲಾ ಸಮಯಗಳು ಗಂಭೀರವಾಗಿರುವುದಿಲ್ಲ. ಕೆಲವು ತಮಾಷೆಯ ದೃಶ್ಯಗಳು ನಡೆಯುತ್ತವೆ. ಮೈದಾನದಲ್ಲಿ ಆಟಗಾರರು ತರಬೇತುದಾರರೊಂದಿಗೆ ಕೀಟಲೆ ಮಾಡುವುದು ಸಹಜ. ಆದರೆ ಯಾರೂ ಅಂಪೈರ್‌ ಅನ್ನು ಎದುರು ಹಾಕಿಕೊಳ್ಳುವುದಿಲ್ಲ. ಅಂತದ್ದರಲ್ಲಿ ಆಟಗಾರನೊಬ್ಬ ಪಂದ್ಯ ನಡೆಯುತ್ತಿರುವಾಗ ಅಂಪೈರ್ ಪ್ಯಾಂಟ್ ಎಳೆದಿದ್ದಾನೆ. ಬೌಲಿಂಗ್ ಮಾಡಲು ಓಡಿ ಬಂದಾಗ ಬೌಲಿಂಗ್ ನಿಲ್ಲಿಸಿ ಅಂಪೈರ್ ಪ್ಯಾಂಟ್ ಎಳೆದು ಓಡಿದ್ದಾನೆ. ಲಂಕಾಶೈರ್ ಕ್ರಿಕೆಟ್ ಲೀಗ್ ನಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಸದ್ಯ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೆ ಕ್ರೀಡಾಭಿಮಾನಿಗಳಲ್ಲೂ ವೈರಲ್ ಆಗಿದೆ.

ಶನಿವಾರ ರಿಸ್ಟನ್ ಕ್ರಿಕೆಟ್ ಕ್ಲಬ್‌ನಲ್ಲಿ ಲಂಕಾಶೈರ್ ಮತ್ತು ಈಸ್ಟ್ ಲಂಕಾಶೈರ್ ನಡುವೆ ಕ್ರಿಕೆಟ್ ಕ್ಲಬ್‌ನಲ್ಲಿ ಪಂದ್ಯ ನಡೆಯಿತು. ಬೌಲ್ ಮಾಡಲು ಸಿದ್ಧವಾಗಿದ್ದ ಬೌಲರ್ ರನ್ ಅಪ್ ಗೆ ಹೋದರು. ಚೆಂಡನ್ನು ಕೈಯಲ್ಲಿಟ್ಟುಕೊಂಡು ರನ್-ಅಪ್ ತೆಗೆದುಕೊಳ್ಳದೆ ನೇರವಾಗಿ ಅಂಪೈರ್ ಬಳಿ ಹೋಗಿ ಪ್ಯಾಂಟ್ ಎಳೆದಿದ್ದಾರೆ. ಆ ಬಳಿಕ ಬೌಲರ್ ಮುಗುಳ್ನಗುತ್ತಲೇ ಅಲ್ಲಿಂದ ಓಡಿಹೋದ. ಸ್ವಲ್ಪ ದೂರ ಹೋಗಿ ಮತ್ತೆ ವಾಪಸ್‌ ಅಂಪೈರ್ ಬಳಿ ಬಂದು ತಮಾಷೆಗಾಗಿ ಮಾಡಿದೆ ಎಂದು ಕ್ಷಮೆ ಕೇಳಿದರು.

ಮೈದಾನದಲ್ಲಿರುವ ಆಟಗಾರರಿಗೆ ಮೊದಲು ಏನು ಅರ್ಥವಾಗದೆ ಅಂಪೈರ್ ಪ್ಯಾಂಟ್ ಕೆಳಗೆ ಬಿದ್ದ ಬಳಿಕ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.  ಅಂಪೈರ್ ಇದನ್ನು ಗಂಭೀರವಾಗಿ ಪರಿಗಣಿಸದೆ ಅವರೂ ಕೂಡ ನಕ್ಕಿದ್ದಾರೆ. ಮೈದಾನದಲ್ಲಿ ಸ್ಪೋರ್ಟಿವ್ ಎಂದರೆ ಇದೇ ಎಂದು ಸಾಬೀತುಪಡಿಸಿದರು. ಇದನ್ನೇ ಇಟ್ಟಕೊಂಡು ಮತ್ತೆ ಈ ರೀತಿ ಮಾಡಬೇಡಿ. ಎಲ್ಲರೂ ನನ್ನಂತೆ ಇರುವುದಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!