ಆಲಿಯಾ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್:‌ ಬಾಕ್ಸ್‌ ಆಫೀಸ್‌ನಲ್ಲಿ ಗಂಗೂಬಾಯಿ ಕಲೆಕ್ಷನ್‌ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಅಲಿಯಾ ಭಟ್‌ ನಟನೆಯ ಗಂಗೂಬಾಯಿ ಕಥಿಯಾವಾಡಿ ಚಿತ್ರ ಬಾಕ್ಸ್‌ ಆಫೀಸ್‌ ನಲ್ಲಿ ಸದ್ದು ಮಾಡುತ್ತಿದೆ. ಆಲಿಯಾ ಭಟ್‌ ನಟನೆ, ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನ ಪ್ರೇಕ್ಷಕರ ಮನಗೆದ್ದಿದೆ. ಚಿತ್ರವು ಕೇವಲ ಒಂದೇ ವಾರದಲ್ಲಿ 100 ಕೋಟಿಗೂ ಹೆಚ್ಚಿನ ಕಲೆಕ್ಷನ್‌ ಮಾಡಿ ಮುನ್ನುಗ್ಗುತ್ತಿದೆ.
ಕಾಮಾಟಿಪುರದ ವೇಶ್ಯೆಯೊಬ್ಬಳು ಮಾಫಿಯಾ ಡಾನ್‌ ಆಗಿ ಬೆಳೆಯುವ ನೈಜ ಕಥೆಯನ್ನೇ ಆದಾರವಾಗಿಟ್ಟುಕೊಂಡು ಗಂಗೂಬಾಯಿ ಕಥಿಯಾವಡಿ ಸಿನಿಮಾವನ್ನು ಮಾಡಲಾಗಿದೆ. ಫೆ. 25 ರಂದು ತೆರೆಕಂಡಿದ್ದ ಚಿತ್ರ ಮೊದಲ ಮತ್ತು ಎರಡನೇ ದಿನ ಕ್ರಮವಾಗಿ 10.50 ಕೋಟಿ ಮತ್ತು 13.32 ಕೋಟಿ ಗಳಿಸಿತ್ತು.  ಮೂರನೇ ದಿನ 15.30 ಕೋಟಿ, ನಾಲ್ಕನೇ ದಿನ  8.19 ಕೋಟಿ ಬಾಚಿಕೊಂಡಿತ್ತು. ನಂತರವೂ ಚಿತ್ರದ ಯಶಸ್ಸಿನ ಓಟ ಹಾಗೆಯೇ ಮುಂದುವರೆದಿದೆ. ಈ ಕುರಿತು ಬನ್ಸಾಲಿ ಪ್ರೊಡಕ್ಷನ್ಸ್‌ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದು, ಚಿತ್ರವು ಭಾರತೀಯ ಮಾರುಕಟ್ಟೆಯಲ್ಲಿ72.94 ಕೋಟಿ ರು., ಗಳಿಸಿದೆ. ವಿಶ್ವಾದ್ಯಂತ ಒಟ್ಟಾರೆ 108 ಕೋಟಿ ಕಲೆಕ್ಷನ್‌ ಮಾಡಿದೆ ಎಂಬ ಮಾಹಿತಿ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!