Sunday, December 3, 2023

Latest Posts

ಅಜ್ಜ ಮೊಬೈಲ್ ಕೊಡಿಸದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಮೊಮ್ಮಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಯುವಕನೊಬ್ಬ ರಾಸಾಯನಿಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೊಳಾಳ್ ಗ್ರಾಮದಲ್ಲಿ ನಡೆದಿದೆ.

20 ವರ್ಷದ ಯಶವಂತ್ ಮೃತ ಯುವಕ

ಈತ ಅ.18ರಂದು ಬೆಳಗ್ಗೆ ಮನೆಯಲ್ಲಿ ರಾಸಾಯನಿಕ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದಾತನನ್ನು ತಕ್ಷಣ ಚಿಕಿತ್ಸೆಗೊಳಪಡಿಸಲಾಗಿತ್ತು. ಅದಾದ ಬಳಿಕ ಆಸ್ಪತ್ರೆಗೆ ಗುರುವಾರ ತಡರಾತ್ರಿ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆತ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ.

ಮೊಬೈಲ್ ಕೊಡಿಸದ್ದಕ್ಕೆ ಕೃತ್ಯ?

ಯಶವಂತ್ ಅ.8ರಂದು ಚಿತ್ರದುರ್ಗದಲ್ಲಿ ನಡೆದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಮೊಬೈಲ್ ಕಳೆದುಕೊಂಡಿದ್ದ. ಆ ಬಳಿಕ ತನ್ನ ಅಜ್ಜನಿಗೆ ಮೊಬೈಲ್‌ ಕೊಡಿಸೆಂದು ಪೀಡಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ ಈರುಳ್ಳಿ ಬೆಳೆ ಮಾರಾಟ ಮಾಡಿದ ನಂತರ ಮೊಬೈಲ್ ಕೊಡಿಸುವುದಾಗಿ ಅಜ್ಜ ಭರವಸೆ ನೀಡಿದ್ದರು. ಮೊಬೈಲ್ ಸಿಗದ ನೋವಿನಲ್ಲಿ ಈ ಕೃತ್ಯ ನಡೆಸಿರಬೇಕು ಎಂದು ತನಿಖೆ ನಡೆಸುತ್ತಿರುವ ಪೊಲೀಸರು ಶಂಕಿಸಿದ್ದಾರೆ.
ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!