ಪ್ರಜ್ವಲ್​ ಗಾಗಿ ಹುಡುಗಾಟ:196 ರಾಷ್ಟ್ರಗಳಿಗೆ ಮಾಹಿತಿ ರವಾನಿಸಿದ ಇಂಟರ್​ಪೋಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 
 
ಹಾಸನ ಸಂಸದ ಪ್ರಜ್ವಲ್​ ರೇವಣ್ಣ ವಿರುದ್ಧ ಬ್ಲೂ ಕಾರ್ನರ್​ ನೊಟೀಸ್ ​ ಜಾರಿ ಮಾಡಲಾಗಿದ್ದು, ಇಂಟರ್​ಪೋಲ್​ 196 ರಾಷ್ಟ್ರಗಳಿಗೆ ಮಾಹಿತಿ ರವಾನಿಸಿರುವುದಾಗಿ ವಿಶೇಷ ತನಿಖಾ ತಂಡ (SIT) ತಿಳಿಸಿದೆ.

ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್​ ರೇವಣ್ಣ ವಿಚಾರಣೆಗೆ ಹಾಜರಾಗಿಲ್ಲ ಮತ್ತು ಎಲ್ಲಿದ್ದಾರೆ ಎಂಬ ವಿಚಾರ ತಿಳಿದಿರಲಿಲ್ಲ. ಹೀಗಾಗಿ ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡುವಂತೆ ಎಸ್‌ಐಟಿ ತಂಡ ಇಂಟರ್‌ಪೋಲ್‌ಗೆ ನೊಟೀಸ್ ನೀಡಿತ್ತು. ಈ ನೋಟಿಸ್‌ಗೆ ಇಂಟರ್‌ಪೋಲ್ ಉತ್ತರಿಸಿದ್ದು, ಸಿಬಿಐ ಮೂಲಕ ಎಸ್​ಐಟಿಗೆ ಮಾಹಿತಿ ನೀಡಿದೆ.

196 ದೇಶಗಳಿಗೆ ನೊಟೀಸ್ ತಲುಪಿಸಲಾಗಿದೆ. ಕರ್ನಾಟಕದ ಏರ್ ಪೋರ್ಟ್, ಬಂದರುಗಳು ಹಾಗೂ ಬಾರ್ಡರ್, ಚೆಕ್ ಪೋಸ್ಟ್ ಎಲ್ಲಾ ಕಡೆಯೂ ಅಲರ್ಟ್ ಘೋಷಿಸಿಲಾಗಿದೆ. ಪ್ರಜ್ವಲ್ ರೇವಣ್ಣ ಬಗ್ಗೆ ಮಾಹಿತಿ ಸಿಕ್ಕಿದ್ದೇ ತಕ್ಷಣ ಹೇಳುವಂತೆ ಇಂಟರ್​ಪೋಲ್ ಹೇಳಿದೆ. ಸದ್ಯ ಎಲ್ಲಾ ದೇಶಗಳಲ್ಲೂ ಪ್ರಜ್ವಲ್ ರೇವಣ್ಣನಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!