ಅಪ್ಪನ ಆಟ ನೋಡಲು ಬಂದ ಬುಮ್ರಾ ಮಗ: ಮೊದಲ ಬಾರಿಗೆ ಮುಖ ರಿವೀಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯಕ್ಕೆ ವಾಂಖೇಡೆ ಮೈದಾನಕ್ಕೆ ತಾಯಿ ಸಂಜನಾ ಗಣೇಶನ್ ಜತೆ ಜಸ್ಪ್ರೀತ್ ಬುಮ್ರಾ ಪುತ್ರ ಅಂಗದ್ ಕೂಡಾಬಂದಿದ್ದನು.

ಇದೇ ಮೊದಲ ಬಾರಿಗೆ ವಾಂಖೇಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ಪುತ್ರನ ಮುಖ ಅನಾವರಣವಾಗಿದೆ.

ಮೇ 06 ಬುಮ್ರಾ ಪತ್ನಿ ಸಂಜನಾ ಗಣೇಶನ್ ಅವರ ಹುಟ್ಟುಹಬ್ಬ ಕೂಡಾ ಆಗಿತ್ತು. ತಮ್ಮ ಬರ್ತ್ ಡೇ ದಿನ ಮಗನೊಂದಿಗೆ ಸಂಜನಾ ಐಪಿಎಲ್ ಪಂದ್ಯ ವೀಕ್ಷಿಸಲು ಮೈದಾನಕ್ಕೆ ಬಂದಿದ್ದರು.

ಸಾಕಷ್ಟು ಡೇಟಿಂಗ್ ಬಳಿಕ ಜಸ್ಪ್ರೀತ್ ಬುಮ್ರಾ ಹಾಗೂ ಸಂಜನಾ ಗಣೇಶನ್ 2021ರ ಮಾರ್ಚ್ 15ರಂದು ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.

ಇದೀಗ ವಾಂಖೇಡೆ ಮೈದಾನದಲ್ಲಿ ಸಂಜನಾ ಗಣೇಶನ್ ಜತೆಗೆ ಮಗ ಅಂಗದ್ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಜಸ್ಪ್ರೀತ್ ಬುಮ್ರಾ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಬುಮ್ರಾ 12 ಪಂದ್ಯಗಳನ್ನಾಡಿ 18 ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಬುಮ್ರಾ ಭರ್ಜರಿ ಪ್ರದರ್ಶನದ ಹೊರತಾಗಿಯೂ ಮುಂಬೈ ಇಂಡಿಯನ್ಸ್ ತಂಡವು ಪ್ಲೇ ಆಫ್‌ಗೇರಲು ವಿಫಲವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!