ಯೂಟ್ಯೂಬ್ ನೋಡಿ ವೈನ್ ತಯಾರಿಸಿದ ಪೋರ: ಕುಡಿದ ಸ್ನೇಹಿತ ಆಸ್ಪತ್ರೆ ಪಾಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯೂಟ್ಯೂಬ್ ನೋಡಿ ವೈನ್ ತಯಾರಿಸಿದ ಪೋರನೋರ್ವ ತನ್ನ ಸಹಪಾಠಿಗೆ ಕುಡಿಸಿ ಆತ ಆಸ್ಪತ್ರೆಗೆ ಸೇರುವಂತಾದ ಘಟನೆ ಕೇರಳದ ಚಿರೈಂಕೀಶ್ ಮುರುಕುಂಪುಳ ವೆಲ್ಲೂರು ಶಾಲೆಯಲ್ಲಿ ನಡೆದಿದೆ.

ಈ ಬಗ್ಗೆ ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಯ ಹೆತ್ತವರು ಮುಖ್ಯಮಂತ್ರಿ ಕಚೇರಿ, ಪೊಲೀಸರಿಗೆ ದೂರು ನೀಡಿದ್ದಾರೆ. 12 ವರ್ಷದ ಈ ಬಾಲಕ ಮನೆಯಲ್ಲಿದ್ದ ದ್ರಾಕ್ಷಿ ಬಳಸಿ ಯೂಟ್ಯೂಬ್ ವೀಡಿಯೊದ ಸಹಾಯದಿಂದ ಮಿಶ್ರಣ ತಯಾರಿಸಿದ್ದ. ಬಳಿಕ ಶಾಲೆಗೆ ತಂದು ಅದನ್ನು ಸಹಪಾಠಿಗೆ ನೀಡಿದ್ದ ಎನ್ನಲಾಗಿದೆ.

ಆಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಶಾಲೆಗಳಲ್ಲಿ ಇಂತಹಾ ಯಾವುದೇ ರೀತಿಯ ಚಟುವಟಿಕೆ ಕಂಡುಬಂದರೆ ಕೂಡಲೇ ಪೊಷಕರಿಗೆ ಮಾಹಿತಿ ನೀಡಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಶಾಲಾ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!