ಈತ ಮನುಷ್ಯನಾ..ತೋಳನಾ? ಮುಖದಲ್ಲೆಲ್ಲಾ ಕೂದಲು: ಭಯ ಹುಟ್ಟಿಸುವಂತಿದೆ ಯುವಕನ ಮುಖ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆತ ಕೂಡ ಎಲ್ಲರ ಹಾಗೆ ಒಬ್ಬ ಮನುಷ್ಯ….ಆದರೆ, ಇವರನ್ನು ಕಂಡರೆ ಪ್ರಾಣಿ ಎಂಬುದರಲ್ಲಿ ಸಂದೇಹವಿಲ್ಲ ಯಾಕೆಂದರೆ ಆತನ ರೂಪವೇ ಹಾಗಿದೆ ಮುಖದ ತುಂಬೆಲ್ಲಾ ಕೂದಲು ಬೆಳೆದಿದ್ದು ಥೇಟ್‌ ಸಿಂಹದ ಹಾಗೆ ಕಾಣುತ್ತಿದ್ದಾರೆ. ಲಲಿತ್ ಪಾಟಿದಾರ್ ಮಧ್ಯಪ್ರದೇಶದ ನಂದ್ ಲೇಥಾ ಗ್ರಾಮದ 17 ವರ್ಷದ ಯುವಕ. ಅವರ ಇಡೀ ದೇಹದ ತುಂಬೆಲ್ಲಾ ಕೂದಲಿದೆ. ಲಲಿತ್ ಒಂದು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದೇ ಹೈಪರ್ಟ್ರಿಕೋಸಿಸ್ (ಅತಿಯಾದ ಕೂದಲು ಬೆಳವಣಿಗೆ). ಇದನ್ನು ತೋಳದ ಸಿಂಡ್ರೋಮ್ ಎಂದೂ ಕರೆಯುತ್ತಾರೆ.

ಲಲಿತ್ ಅವರಿಗೆ ಆರನೇ ವಯಸ್ಸಿನಲ್ಲಿ ಈ ಕಾಯಿಲೆ ಇರುವುದು ಪತ್ತೆಯಾಯಿತು. ಅಂದಿನಿಂದ ದೇಹದಾದ್ಯಂತ ಕೂದಲು ಬೆಳೆಯತೊಡಗಿತು. ಲಲಿತ್ ಅವರನ್ನು ಕಂಡರೆ ಶಾಲೆಯಲ್ಲಿ ಎಲ್ಲರೂ ಹೆದರುತ್ತಾರೆ ನೋಡಲು ತೋಳದಂತೆ ಕಾಣುತ್ತಾರೆ. ಕೂದಲು ತುಂಬಾ ಬೆಳೆದಾಗ ಟ್ರಿಮ್ ಮಾಡುತ್ತೇನೆ ಎನ್ನುತ್ತಾರೆ ಲಲಿತ್. ಮಧ್ಯಕಾಲೀನ ಯುಗದಿಂದ ಕೇವಲ 50 ಜನರಿಗೆ ಮಾತ್ರ ಈ ರೋಗವಿದೆ ಮತ್ತು ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

Boy With Hair

ಅವನ ಸಹಪಾಠಿಗಳು ಈತನನ್ನು ಮಂಕಿ ಬಾಯ್ ಎಂದು ಕರೆಯುತ್ತಾರೆ. ಎಲ್ಲಿ  ಅವರನ್ನು ಕಚ್ಚಿ ಬಿಡುತ್ತೇನೋ ಎಂಬ ಭಯ ಅವರೆಲ್ಲರಿಗೂ ಇದೆ ಎಂದು ಲಲಿತ್ ಹೇಳಿದ್ದಾರೆ. “ನಾನು ಸರಳ ಕುಟುಂಬದಿಂದ ಬಂದವನು. ನನ್ನ ತಂದೆ ರೈತ. ಸದ್ಯ ನಾನು 12ನೇ ತರಗತಿ ಓದುತ್ತಿದ್ದೇನೆ. ಓದುತ್ತಲೇ ತಂದೆಗೆ ಕೃಷಿಯಲ್ಲಿ ಸಹಾಯ ಮಾಡುತ್ತೇನೆ’ ಎನ್ನುತ್ತಾರೆ ಲಲಿತ್‌

Boy With Hair

ನಾನು ಹುಟ್ಟಿದಾಗಲೇ ವೈದ್ಯರು ನನಗೆ ಕ್ಷೌರ ಮಾಡಿದ್ದರು ಎಂದು ನನ್ನ ಪೋಷಕರು ಹೇಳುತ್ತಾರೆ. ಆರು ವರ್ಷದ ತನಕ ನನ್ನ ದೇಹದಲ್ಲಾದ ಬದಲಾವಣೆಯನ್ನು ನಾನು ಗಮನಿಸಲಿಲ್ಲ. ಆರನೇ ವಯಸ್ಸಿನಲ್ಲಿ ನನ್ನ ದೇಹವು ಇತರರಿಗಿಂತ ವಿಭಿನ್ನವಾಗಿ ಕೂದಲು ಬೆಳೆಯುತ್ತಿರುವುದನ್ನು  ಗಮನಿಸಿದೆ. ಆ ನಂತರವೇ ಗೊತ್ತಾಗಿದ್ದು ಹೈಪರ್ ಟ್ರೈಕೋಸಿಸ್ ಎಂಬ ಅಪರೂಪದ ಕಾಯಿಲೆಯೊಂದಿಗೆ ನಾನು ಬಳಲುತ್ತಿದ್ದೇನೆ ಎಂದು ನನ್ನ ಕುಟುಂಬದಲ್ಲಿ ಯಾರಿಗೂ ಈ ಕಾಯಿಲೆ ಇಲ್ಲ. ನನಗೆ ಮೊದಲ ಬಾರಿಗೆ ಈ ಕಾಯಿಲೆ ಬಂದಿದೆ ಎಂದರು.

ನನ್ನ ಸ್ಥಿತಿಯ ಬಗ್ಗೆ ನಾನು ಎಂದಿಗೂ ಯೋಚನೆ ಮಾಡಿಲ್ಲ ಆದರೆ, ನನ್ನ ತಂದೆ-ತಾಯಿ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಲಲಿತ್ ಬಹಿರಂಗಪಡಿಸಿದ್ದಾರೆ. ನನ್ನನ್ನು ನೋಡಿದರೆ ಮಕ್ಕಳು ಅಳುತ್ತಾರೆ. ನನ್ನನ್ನು ಪ್ರಾಣಿ ಎಂದುಕೊಂಡು ಮಕ್ಕಳು ಹೆದರುತ್ತಿದ್ದಾರೆ ಎಂದು ಲಲಿತ್ ಆತಂಕ ವ್ಯಕ್ತಪಡಿಸಿದರು. ಕೂದಲು ಚೆನ್ನಾಗಿ ಬೆಳೆದರೆ ಟ್ರಿಮ್ ಮಾಡುತ್ತೇನೆ ಅದೊಂದನ್ನು ಹೊರತುಪಡಿಸಿ ಅವರಿಗೆ ಬೇರೆ ದಾರಿಯೇ ಇಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!