ಬಾಂಗ್ಲಾದಲ್ಲಿ ‘ಬಾಯ್ಕಾಟ್ ಭಾರತ ಅಭಿಯಾನ’: ವಿಪಕ್ಷಗಳಿಗೆ ಪ್ರಧಾನಿ ಶೇಕ್ ಹಸಿನಾ ಖಡಕ್ ತಿರುಗೇಟು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಂಗ್ಲಾದೇಶದಲ್ಲಿ ವಿಪಕ್ಷಗಳು ಬಾಯ್ಕಾಟ್ ಇಂಡಿಯಾ ಅಭಿಯಾನ ಆರಂಭಿಸಿದ್ದು, ಭಾರತದ ಉತ್ಪನ್ನ, ಭಾರತದ ಆಹಾರ ಸೇರಿ ಹಲವು ದ್ವಿಪಕ್ಷೀಯ ಸಂಬಂಧಗಳೂ ಬಹಿಷ್ಕಾರದ ಅಭಿಯಾನ ಆರಂಭಿಸಿದೆ .

ಇತ್ತ ಇದಕ್ಕೆ ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸಿನಾ ಖಡಕ್ ತಿರುಗೇಟು ನೀಡಿದ್ದಾರೆ. ಈ ಅಭಿಯಾನ ಆರಂಭಿಸಿರುವ ನಾಯಕರು ಜನರಲ್ಲಿ ಬಾಯ್ಕಾಟ್ ಇಂಡಿಯಾ ಎಂದು ಹೇಳುತ್ತಿದ್ದಾರೆ. ಈ ನಾಯಕರ ಪತ್ನಿಯರಲ್ಲಿರುವ ಭಾರತದ ಸೀರೆಯನ್ನು ಸುಟ್ಟು ಹಾಕುತ್ತೀರಾ? ನೀವು ಬಾಯ್ಕಾಟ್ ಇಂಡಿಯಾ ಮಾಡಿ ತೋರಿಸಿ ಎಂದು ಸವಾಲು ಹಾಕಿದ್ದಾರೆ.

ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಭಾರತದ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಸತತ 4ನೇ ಭಾರಿ ಪ್ರಧಾನಿಯಾಗಿರುವುದು ಭಾರತದ ನೆರವಿನಿಂದ ಎಂದು ಬಾಂಗ್ಲಾದೇಶದ ವಿಪಕ್ಷಗಳು ಆರೋಪ ಮಾಡುತ್ತಿದೆ. ಭಾರತದ ತಾಳಕ್ಕೆ ತಕ್ಕಂತೆ ಸೇಕ್ ಹಸಿನಾ ಕುಣಿಯುತ್ತಿದ್ದಾರೆ ಅನ್ನೋ ಆರೋಪವನ್ನು ಮಾಡಿದೆ. ಈ ಮೂಲಕ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಅಲೆ ಸೃಷ್ಟಿಸಿ ಶೇಕ್ ಹಸಿನಾರಿಂದ ಅಧಿಕಾರ ಕಸಿದುಕೊಳ್ಳುವ ಯತ್ನದಲಿದೆ.

‘ಬಾಯ್ಕಾಟ್ ಭಾರತ’ ಅಭಿಯಾನ ತೀವ್ರಗೊಳ್ಳುತ್ತಿರುವಂತೆ ಶೇಕ್ ಹಸಿನಾ ಪ್ರತಿಕ್ರಿಯಿಸಿದ್ದು, ಬಾಂಗ್ಲಾದೇಶದ ಪ್ರತಿಪಕ್ಷ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ ನಾಯಕರು ಭಾರತದ ಉತ್ಪನ್ನಕ್ಕೆ ಬಹಿಷ್ಕಾರ ಅಭಿಯಾನ ತೀವ್ರಗೊಳಿಸುತ್ತಿದ್ದಾರೆ. ಆದರೆ ನ್ಯಾಷನಲಿಸ್ಟ್ ಪಾರ್ಟಿ ನಾಯಕರ ಪತ್ನಿಯರ ಬಳಿ ಎಷ್ಟು ಭಾರತದ ಸೀರೆಗಳಿವೆ. ಅವುಗಳನ್ನು ಸುಟ್ಟು ಹಾಕುತ್ತೀರಾ? ನಾಯಕರು ತಮ್ಮ ಪತ್ನಿಯರ ಬಳಿ ಇರುವ ಭಾರತೀಯ ಸೀರೆಗಳನ್ನು ತಂದು ಅವರ ಕಚೇರಿ ಮುಂದೆ ಸುಟ್ಟುಹಾಕಲಿ. ಹೀಗೆ ಮಾಡಿದರೆ ಅದು ನಿಜವಾದ ಬಾಯ್ಕಾಟ್ ಇಂಡಿಯಾ ಅಭಿಯಾನ ಎಂದು ಹೇಳಿದ್ದಾರೆ.

ಸದ್ಯ ಜನಸಾಮಾನ್ಯರಲ್ಲಿ ಬಾಯ್ಕಾಟ್ ಇಂಡಿಯಾ ಎಂದು ಹೇಳಿ, ತಾವು ಭಾರತದ ಉತ್ಪನ್ನ ಅನುಭವಿಸುತ್ತಿರುವುದು ಎಷ್ಟು ಸರಿ . ಪ್ರಮುಖವಾಗಿ ಶೇಕ್ ಹಸೀನಾ ಬಳಿ ಇರುವ ಬಹುತೇಕ ಸೀರೆಗಳು ಭಾರತದ ಪ್ರಮುಖ ನಾಯಕರು ಉಡುಗೊರೆಯಾಗಿ ನೀಡಿದ್ದಾರೆ. ಇದೇ ಸೀರೆಗಳನ್ನು ಪ್ರಮುಖ ಆಧಾರವಾಗಿಟ್ಟುಕೊಂಡು ವಿಪಕ್ಷಗಳು ಬಾಯ್ಕಾಟ್ ಇಂಡಿಯಾ ಅಭಿಯಾನ ತೀವ್ರಗೊಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!