14 ಪತ್ರಕರ್ತರ ಬಹಿಷ್ಕಾರ: I.N.D.I.A ನಿರ್ಧಾರಕ್ಕೆ ಮೈತ್ರಿಕೂಟದಲ್ಲೇ ವಿರೋಧ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

14 ಪತ್ರಕರ್ತರು ಮತ್ತು ಸುದ್ದಿ ನಿರೂಪಕರು ಆಯೋಜಿಸುವ ಕಾರ್ಯಕ್ರಮಗಳನ್ನು ಬಹಿಷ್ಕರಿಸುವ I.N.D.I.A ನಿರ್ಧಾರಕ್ಕೆ ಮೈತ್ರಿಕೂಟದಲ್ಲೇ ವಿರೋಧ ವ್ಯಕ್ತವಾಗಿದೆ.

ಬಿಹಾರ ಸಿಎಂ ನಿತೀಶ್ ಕುಮಾರ್ ಕೂಡ ಈ ನಿರ್ಧಾರವನ್ನುತಿರಸ್ಕರಿಸಿದ್ದಾರೆ. “ನಾನು ಯಾವುದೇ ಪತ್ರಕರ್ತನ ವಿರೋಧಿಯಲ್ಲ ಮತ್ತು ಬಹಿಷ್ಕಾರ ಮಾಡುವುದು ತಪ್ಪು” ಎಂದು ಅವರು ಹೇಳಿದ್ದಾರೆ.

ನಾನೇಕೆ ಬಹಿಷ್ಕರಿಸಬೇಕು? ನಾನು ಪತ್ರಕರ್ತರ ಪರವಾಗಿದ್ದೇನೆ. ನೋಡಿ, ಪತ್ರಕರ್ತರಿಗೆ ಪೂರ್ಣ ಸ್ವಾತಂತ್ರ್ಯ ಸಿಕ್ಕಾಗ, ಅವರು ಸರಿಯಾದ ಮತ್ತು ಸೂಕ್ತವೆಂದು ಪರಿಗಣಿಸುವದನ್ನು ಬರೆಯುತ್ತಾರೆ. ಪತ್ರಕರ್ತರನ್ನು ಹಿಡಿತದಲ್ಲಿ ಇಡಬಹುದೇ? ಪತ್ರಕರ್ತರ ಮೇಲೆ ನಾನು ಯಾವತ್ತಾದರೂ ಯಾವುದೇ ರೀತಿಯ ನಿಯಂತ್ರಣವನ್ನು ಇಟ್ಟುಕೊಂಡಿದ್ದೇನೆಯೇ?’’ ಎಂದೂ ನಿತೀಶ್‌ ಕುಮಾರ್‌ ಪ್ರಶ್ನಿಸಿದ್ದಾರೆ.

ನಾನು ಯಾರ ವಿರುದ್ಧವೂ ಅಲ್ಲ.ಇದೀಗ ಕೇಂದ್ರದಲ್ಲಿರುವ ವ್ಯಕ್ತಿಗಳು ಕೆಲವರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ ಮತ್ತು ಆ ಜನರು ಕೆಲವು ರೀತಿಯ ಪತ್ರಿಕೋದ್ಯಮದಲ್ಲಿನ ತಪ್ಪು ಕೃತ್ಯಗಳನ್ನು ಎಸಗುತ್ತಿದ್ದಾರೆ. ನಿಮಗೆ ಇವೆಲ್ಲವೂ ತಿಳಿದಿಲ್ಲವೇ? ನಾನು ಯಾವಾಗಲೂ ನಿಮ್ಮನ್ನು (ಮಾಧ್ಯಮ) ಗೌರವಿಸುತ್ತೇನೆ’ ಎಂದೂ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!