ಸಿರಾಜ್ ದಾಳಿಗೆ ಲಂಕಾ ಚೆಲ್ಲಾಪಿಲ್ಲಿ: 50 ರನ್ ಗೆ ಸರ್ವಪತನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಏಷ್ಯಾಕಪ್ ಫೈನಲ್‌ನಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್ ದಾಳಿಗೆ ಲಂಕಾ ಬ್ಯಾಟರ್‌ಗಳು ಕಂಗಾಲಾಗಿದ್ದು, ಮೊದಲ ಮೂರು ಓವರ್‌ನಲ್ಲೇ ಸಿರಾಜ್, ಲಂಕಾದ 5 ವಿಕೆಟ್ ಉರುಳಿದ್ದಾರೆ.

ಈ ಮೂಲಕ 15.2 ಓವರ್ ಗೆ ಶ್ರೀಲಂಕಾ ತಂಡವು ತನ್ನ ಎಲ್ಲ ವಿಕೆಟ್ ಕಳೆದುಕೊಳ್ಳುವ ಮೂಲಕ ಮುಖಭಂಗ ಅನುಭವಸಿದೆ .

ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಲಂಕಾ ತಂಡಕ್ಕೆ ಆರಂಭದಲ್ಲೇ ವೇಗಿ ಜಸ್ಪ್ರೀತ್ ಬುಮ್ರಾ ಶಾಕ್ ನೀಡಿದರು. ಮೊದಲ ಓವರ್‌ನ ಮೂರನೇ ಎಸೆತದಲ್ಲೇ ಬುಮ್ರಾ, ಲಂಕಾ ಆರಂಭಿಕ ಬ್ಯಾಟರ್ ಕುಸಾಲ್ ಪೆರೆರಾರನ್ನು ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಹಾದಿ ತೋರಿಸಿದರು.

ಬಳಿಕ ಎಂಟ್ರಿಕೊಟ್ಟ ಮೊಹಮ್ಮದ್ ಸಿರಾಜ್, ಮೊದಲ ಓವರ್‌ನಲ್ಲಿ ಯಾವುದೇ ರನ್ ಬಿಟ್ಟು ಕೊಡದೇ ಮೇಡನ್ ಓವರ್ ಮಾಡಿದರು. ಇದಾದ ಬಳಿಕ ತಾವೆಸೆದ ಎರಡನೇ ಓವರ್‌ನಲ್ಲೇ ಲಂಕಾದ ನಾಲ್ಕು ಬ್ಯಾಟರ್‌ಗಳನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.

ಇನಿಂಗ್ಸ್‌ 4ನೇ ತಮ್ಮ ಎರಡನೇ ಓವರ್‌ನ ಮೊದಲ ಎಸೆತದಲ್ಲೇ ಸಿರಾಜ್, ಪಥುಮ್ ನಿಸ್ಸಾಂಕಗೆ ಪೆವಿಲಿಯನ್ ಹಾದಿ ತೋರಿಸಿದರು.ಇನ್ನು ಮೂರನೇ ಎಸೆತದಲ್ಲಿ ಸಿರಾಜ್‌, ಸಮರವಿಕ್ರಮರನ್ನು ಎಲ್‌ಬಿ ಬಲೆಗೆ ಕೆಡಹುವಲ್ಲಿ ಯಶಸ್ವಿಯಾದರು. ಮರು ಎಸೆತದಲ್ಲಿ ಅಸಲಂಕಾ, ಇಶಾನ್ ಕಿಶನ್‌ಗೆ ಕ್ಯಾಚಿತ್ತು ಪೆವಿಲಿಯನ್ ಹಾದಿ ಹಿಡಿದರು. ಇನ್ನು 5ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಧನಂಜಯ ಡಿ ಸಿಲ್ವಾ, ಆರನೇ ಎಸೆತದಲ್ಲಿ ಕೆ ಎಲ್‌ ರಾಹುಲ್‌ಗೆ ಕ್ಯಾಚಿತ್ತು ಪೆವಿಲಿಯನ್ ಪೆರೇಡ್ ನಡೆಸಿದರು.

ಇನ್ನು ಸಿರಾಜ್ ತಾವೆಸೆದ ಮೂರನೇ ಹಾಗೂ ಇನಿಂಗ್ಸ್‌ನ 6ನೇ ಓವರ್‌ನ 4ನೇ ಎಸೆತದಲ್ಲಿ ಶ್ರೀಲಂಕಾದ ನಾಯಕ ದಶುನ್ ಶಾನಕ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಕೇವಲ 15 ಎಸೆತಗಳ ಅಂತರದಲ್ಲಿ 5 ವಿಕೆಟ್ ಗೊಂಚಲು ತಮ್ಮದಾಗಿಸಿಕೊಳ್ಳುವಲ್ಲಿ ಸಿರಾಜ್ ಯಶಸ್ವಿಯಾದರು.

ಇದರ ಬಳಿಕ ಕೊಂಚ ಲಯಕ್ಕೆ ಬಂದರೂ ಎನ್ನುವಷ್ಟರಲ್ಲಿ ಮತ್ತೆ ಪೆವಿಲಿಯನ್ ಪೆರೇಡ್ ಶುರುವಾಗಿದ್ದು, ಮೆಡಿಸ್ ೧೭ ರನ್ ಗಳಿಸಿ ಔಟಾದರೇ , ವೆಳ್ಳಾಳಗೆ8 ರನ್ ಗೆ ಪಾಂಡ್ಯ ಗೆ ವಿಕೆಟ್ ನೀಡಿದರು.

ಅಂತಿಮವಾಗಿ 50 ರನ್ ಗೆ ಸರ್ವಪತನ ಕಂಡಿತು.

ಭಾರತ ಪರ ಸಿರಾಜ್ 6 ವಿಕೆಟ್ ಪಡೆದರೆ , ಪಾಂಡ್ಯ 3 ವಿಕೆಟ್ ತಮ್ಮದಾಗಿಸಿಕೊಂಡರು. ಬುಮ್ರಾ ಒಂದು ವಿಕೆಟ್ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!