ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೇ ಒಂದು ಟ್ವೀಟ್‌ನಿಂದಾಗಿ ಪ್ರತಿಷ್ಠಿತ ಕಂಪನಿ ಸ್ಟಾರ್‌ಬಕ್ಸ್ ಲಕ್ಷ ಕೋಟಿ ರೂಪಾಯಿಯನ್ನು ಕಳೆದುಕೊಂಡಿದೆ.
ಇಸ್ರೇಲ್‌ಗೆ ಬೆಂಬಲ ನೀಡಿ ಸ್ಟಾರ್‌ಬಕ್ಸ್ ಕೆಲಸಗಾರರ ಒಕ್ಕೂಟ ಮಾಡಿದ ಟ್ವೀಟ್‌ನಿಂದಾಗಿ ಕಂಪನಿಯ ಷೇರುಮೌಲ್ಯ ದಿನೇ ದಿನ ಕುಸಿಯುತ್ತಿದೆ.
ಇದೀಗ ಸ್ಟಾರ್‌ಬಕ್ಸ್‌ನ ಷೇರುಸಂಪತ್ತು ಶೇ.೧೦ರಷ್ಟು ಕರಗಿಹೋಗಿದೆ, ಇದರ ನಷ್ಟ ಎಷ್ಟು ಗೊತ್ತಾ? ಬರೋಬ್ಬರಿ 11 ಬಿಲಿಯನ್ ಡಾಲರ್, ಇನ್ನೂ ಸ್ಪಷ್ಟವಾಗಿ ಹೇಳಬೇಕಂದ್ರೆ 90,000 ಕೋಟಿ ರೂಪಾಯಿಗಳಾಗುತ್ತದೆ.
ಇಷ್ಟೇ ಅಲ್ಲದೆ ಜನ ಸ್ಟಾರ್‌ಬಕ್ಸ್‌ಗೆ ಹೋಗೋದನ್ನೂ ಕಡಿಮೆ ಮಾಡಿದ್ದಾರೆ. ಈ ನಷ್ಟವನ್ನು ತುಂಬಿಕೊಳ್ಳೋಕೆ ಸ್ಟಾರ್‌ಬಕ್ಸ್ ಹೊಸ ಪ್ಲ್ಯಾನ್‌ನೊಂದಿಗೆ ಮತ್ತೆ ಮೇಲೇಳಬೇಕಿದೆ.