ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಪದಾರ್ಥಗಳು:
ಸಿಹಿ ಕಾರ್ನ್ ಕಾಳುಗಳು
ಈರುಳ್ಳಿ
ಕಡಲೆ ಹಿಟ್ಟು
ಅಕ್ಕಿ ಹಿಟ್ಟು
ಅರಿಶಿನ
ಕಾಶ್ಮೀರಿ ಕೆಂಪು ಮೆಣಸಿನ ಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಚಾಟ್ ಮಸಾಲ
ಕರಿಬೇವಿನ ಎಲೆಗಳು
ಉಪ್ಪು
ಎಣ್ಣೆ
ತಯಾರಿಸುವ ವಿಧಾನ:
* ಮೊದಲನೆಯದಾಗಿ ದೊಡ್ಡ ಬಟ್ಟಲಿನಲ್ಲಿ 2 ಕಪ್ ಬೇಯಿಸಿದ ಸಿಹಿ ಕಾರ್ನ್ ಕಾಳುಗಳನ್ನು ಮತ್ತು ತೆಳುವಾಗಿ ಕತ್ತರಿಸಿದ ಈರುಳ್ಳಿ ಹಾಕಿ. ನಂತರ ಜೋಳವನ್ನು ಚೆನ್ನಾಗಿ ಹಿಸುಕಿ ಮಿಶ್ರಣ ಮಾಡಿ.
* ಈಗಕಪ್ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಅರಿಶಿನ, ಮೆಣಸಿನ ಪುಡಿ, ಚಾಟ್ ಮಸಾಲ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಿಂಗ್, ಕೆಲವು ಕರಿಬೇವಿನ ಎಲೆಗಳು ಮತ್ತು ಉಪ್ಪು ಸೇರಿಸಿ ನೀರು ಹಾಕಿ ಕಲಸಿ.
* ಈಗ ಅಗತ್ಯವಿದ್ದರೆ ಹೆಚ್ಚು ಕಡಲೆಹಿಟ್ಟು ಮತ್ತು ಅಕ್ಕಿ ಹಿಟ್ಟನ್ನು ಸೇರಿಸಿ. ಈಗ ಸಿದ್ಧಗೊಂಡ ಕಾರ್ನ್ ಪಕೋಡಾ ಮಿಶ್ರಣದಿಂದ ಸಣ್ಣ ಉಂಡೆ ಮಾಡಿ, ಬಿಸಿ ಎಣ್ಣೆಯಲ್ಲಿ ಬಿಡಿ. ಮೀಡಿಯಂ ಪ್ಲೇಮ್ ನಲ್ಲಿ ಹುರಿಯಿರಿ. ಪಕೋಡ ಗರಿಗರಿಯಾಗಿ ಮತ್ತು ಗೋಲ್ಡನ್ ಆಗುವವರೆಗೆ ಫ್ರೈ ಮಾಡಿ.
ಅಂತಿಮವಾಗಿ ಗರಿಗರಿಯಾದ ಕಾರ್ನ್ ಪಕೋಡಾವನ್ನು ಚಟ್ನಿ ಅಥವಾ ಟೊಮೆಟೊ ಸಾಸ್‌ನೊಂದಿಗೆ ಸವಿಯಿರಿ.