ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಪಿಎಲ್ ರೇಷನ್ ಕಾರ್ಡ್ ರದ್ದು ವಿಚಾರ ರಾಜ್ಯಾದ್ಯಂತ ಗೊಂದಲಕ್ಕೆ ಕಾರಣವಾಗಿದೆ. ಕೆಲವು ಬಿಪಿಎಲ್ ರೇಷನ್ ಕಾರ್ಡ್ ರದ್ದಿನಿಂದ ಅರ್ಹ ಫಲಾನುಭವಿಗಳು ಕಂಗಾಲಾಗಿದ್ದಾರೆ.
ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡುತ್ತಿರುವುದಕ್ಕೆ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ. ಬಿಪಿಎಲ್ ಕಾರ್ಡ್ ರದ್ದಾಗಲ್ಲ, ಎಪಿಎಲ್ ಕಾರ್ಡ್ ರದ್ದಾಗಲ್ಲ. ಶೇಕಡಾ 20-25ರಷ್ಟು BPLಗೆ ಅರ್ಹರಲ್ಲದವರು ಸೇರಿಕೊಂಡಿದ್ದಾರೆ. ಬಡವರಲ್ಲದವರು, ಅರ್ಹರಲ್ಲದವರೂ ಕೂಡ ಸೇರಿಕೊಂಡಿದ್ದಾರೆ. ಜನರು ಭಯಪಡಬೇಕಿಲ್ಲ, ಯಾವ ಕಾರ್ಡ್ ಕೂಡ ರದ್ದಾಗಲ್ಲ ಎಂದಿದ್ದಾರೆ.
ಇನ್ನು, ಬಿಪಿಎಲ್‌ಗೆ ಯಾರು ಅರ್ಹರಲ್ಲವೋ ಅವರು ಎಪಿಎಲ್‌ನಲ್ಲಿ ಇರುತ್ತಾರೆ. ಯಾರಾದರೂ ಬಿಪಿಎಲ್ ಕಾರ್ಡ್ ಬಿಟ್ಟಿದ್ರೆ ಅವರನ್ನ ಮತ್ತೆ ಸೇರಿಸುತ್ತೇವೆ. ಯಾರೂ ಕೂಡ ಭಯ ಪಡಬೇಕಾಗಿಲ್ಲ. ಯಾವ ಕಾರ್ಡ್ ಕೂಡ ರದ್ದು ಆಗೋದಿಲ್ಲ. ಮುಂದಿನ 15-20 ದಿನಗಳಲ್ಲಿ BPL ಕಾರ್ಡ್ ಸಂಪೂರ್ಣ ಪರಿಷ್ಕರಣೆ ಆಗುತ್ತದೆ. ಹೊಸ ಕಾರ್ಡ್ ಕೂಡ ಬಿಡುಗಡೆ ಮಾಡುತ್ತೇವೆ ಎಂದು ಸಚಿವ ಕೆ.ಹೆಚ್ ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.