ಮಳವಳ್ಳಿಯಲ್ಲಿ ಚಿರತೆ ದಾಳಿಗೆ ಕುರಿಗಳು ಬಲಿ: ಕಣ್ಣೀರಿಟ್ಟ ಮನೆಯ ಯಜಮಾನ

ಹೊಸದಿಗಂತ ವರದಿ,ಮಂಡ್ಯ:

ಕುರಿ ಕೊಟ್ಟಿಗೆಗೆ ದಾಳಿ ನಡೆಸಿರುವ ಚಿರತೆ ನಾಲ್ಕು ಕುರಿಗಳನ್ನು ಕಚ್ಚಿ, ಸಾಯಿಸಿರುವ ಘಟನೆ ಮಳವಳ್ಳಿ ತಾಲೂಕಿನ ಅಗಸನಪುರ ಗ್ರಾಮದಲ್ಲಿ ನಡೆದಿದ್ದು, ಘಟನೆಯಿಂದಾಗಿ ಒಂದೂವರೆ ಲಕ್ಷಕ್ಕೂ ಹೆಚ್ಚು ರೂ. ನಷ್ಟವಾಗಿದೆ.

ಗ್ರಾಮದ ಬಸವರಾಜು ಎಂಬುವರ ಕೊಟ್ಟಿಗೆಯಲ್ಲಿದ್ದ ನಾಲ್ಕು ಕುರಿಗಳನ್ನು ಸಾಯಿಸಿ, ಕುರಿಗಳ ಮಾಂಸ ತಿಂದು ಚಿರತೆ ಪರಾರಿಯಾಗಿದೆ.
ಮೂಲತಃ ಆಗಸನಪುರ ಗ್ರಾಮದ ವಾಸಿ ಬಸವರಾಜ್ ಎಂಬವರು ಕುರಿ ಅಡುಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿದ್ದರು. ಸೋಮವಾರ ತಡರಾತ್ರಿ ಒಂದು ಚಿರತೆ ಎರಡು ಮರಿಗಳ ಜೊತೆ ಬಂದು ನಮ್ಮ ಕುರಿಗಳನ್ನು ಕಚ್ಚಿ ತಿಂದು ಹೋಗಿರುತ್ತವೆ. ಇದರಿಂದ ನಮಗೆ ಒಂದುವರೆ ಲಕ್ಷ ಕು ಹೆಚ್ಚು ನಷ್ಟವಾಗಿದೆ. ಇದರಿಂದ ರಾತ್ರಿ ವೇಳೆ ಮನೆಯಿಂದ ಹೊರಗೆ ಬರಲು ಭಯವಾಗುತ್ತದೆ, ಸಂಬಂಧಪಟ್ಟ ಅಧಿಕಾರಿಗಳು ಚಿರತೆಯನ್ನು ಹಿಡಿಯಲು ಬೋನನ್ನು ಇಡುವಂತೆ ಮನವಿ ಮಾಡಿದ್ದಾರೆ.

ಬಸವರಾಜ ಅವರ ಪತ್ನಿ ರತ್ನಮ್ಮ ಮಾತನಾಡಿ ನಮ್ಮ ಗ್ರಾಮದ ಒಳಗೆ ಬಂದು ನಮ್ಮ ಮನೆ ಹಿಂಭಾಗದ ಕೊಟ್ಟಿಗೆಯಲ್ಲಿದ್ದ ಕುರಿಗಳು ಕಿರಿಚಿಕೊಂಡಾಗ ನಾವು ತಕ್ಷಣ ಬಂದಾಗ ನಮ್ಮನ್ನು ನೋಡಿ ಒಂದು ಚಿರತೆ ಎರಡು ಮರಿಗಳ ಜೊತೆ ಓಡಿಹೋಗಿತ್ತು. ನಾವು ತಕ್ಷಣ ಬರದಿದ್ದರೆ ಇನ್ನೂ ಹಲವು ಆಡುಗಳನ್ನು ತಿಂದು ಇನ್ನು ಹೆಚ್ಚಿನ ನಷ್ಟ ಉಂಟು ಮಾಡುತ್ತಿದ್ದವು. ಅರಣ್ಯ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿದ್ದಾರೆ. ನಮಗೆ ಸೂಕ್ತ ಪರಿಹಾರ ನೀಡಿ ಎಂದು ಕಣ್ಣೀರಿಡುತ್ತಾ ತಮ್ಮ ಅಳಿಲನ್ನು ತೋಡಿಕೊಂಡರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!