Tuesday, February 27, 2024

ಬ್ರಹ್ಮಾಸ್ತ್ರದಿಂದ ಮತ್ತೊಂದು ಬಂಪರ್ ಆಫರ್: ಕೇವಲ ನಾಲ್ಕು ದಿನ ಮಾತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಾಲಿವುಡ್‌ನಲ್ಲಿ ಬಿಡುಗಡೆಯಾದ ಪ್ಯಾನ್ ಇಂಡಿಯಾ ಸಿನಿಮಾ ‘ಬ್ರಹ್ಮಾಸ್ತ್ರ’ಕ್ಕೆ ದೇಶಾದ್ಯಂತ ಪಾಸಿಟಿವ್‌ ಟಾಕ್‌ ಕೇಳಿಬರುತ್ತಿದೆ.    ಅಯಾನ್ ಮುಖರ್ಜಿ ನಿರ್ದೇಶನದ ಈ ಕಾಲ್ಪನಿಕ ಸಿನಿಮಾದಲ್ಲಿ ಬಾಲಿವುಡ್ ಹೀರೋ ರಣಬೀರ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಆಲಿಯಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್, ಅಕ್ಕಿನೇನಿ ನಾಗಾರ್ಜುನ ಮತ್ತು ಮೌನಿ ರಾಯ್ ಈ ಚಿತ್ರದಲ್ಲಿ ಇತರ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ನಿರೀಕ್ಷೆಯಂತೆ ಈ ಚಿತ್ರ ಒಳ್ಳೆ ಟಾಕ್ ಪಡೆದು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಉತ್ತರ, ದಕ್ಷಿಣ ಎಂಬ ಭೇದವಿಲ್ಲದೆ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ. ಹಾಗಾಗಿ ಸೆಪ್ಟೆಂಬರ್ 23 ರಂದು ‘ರಾಷ್ಟ್ರೀಯ ಸಿನಿಮಾ ದಿನ’ ಸಂದರ್ಭದಲ್ಲಿ ಈ ಚಿತ್ರದ ಟಿಕೆಟ್ ದರವನ್ನು ರಿಯಾಯಿತಿ ದರದಲ್ಲಿ ನೀಡಲಾಯಿತು. ಈ ಆಫರ್‌ನಿಂದಾಗಿ ಅಂದು ಬರೋಬ್ಬರಿ 80 ಪರ್ಸೆಂಟ್ ಆಕ್ಯುಪೆನ್ಸಿ ಥಿಯೇಟರ್ ಗಳಲ್ಲಿ ಕಂಡು ಬಂದಿತ್ತು. ಇದೀಗ ಮತ್ತೊಮ್ಮೆ ಅಂಥದ್ದೊಂದು ಬಂಪರ್ ಆಫರ್ ನೀಡಲು ಬ್ರಹ್ಮಾಸ್ತ್ರ ತಂಡ ಸಿದ್ಧವಾಗಿದೆ.

ಸದ್ಯ ದೇಶಾದ್ಯಂತ ನವರಾತ್ರಿಯನ್ನು ಆಚರಿಸುತ್ತಿರುವ ಪ್ರೇಕ್ಷಕರಿಗೆ ಈ ಸಿನಿಮಾದ ಟಿಕೆಟ್ ದರವನ್ನು ನಾಲ್ಕು ದಿನಗಳಿಗೆ ಕೇವಲ 100ರೂಪಾಯಿಗೆ ನೀಡಲು ಬ್ರಹ್ಮಾಸ್ತ್ರ ತಂಡ ನಿರ್ಧರಿಸಿದೆ. ಈ ಆಫರ್ ಸೆಪ್ಟೆಂಬರ್ 26 ರಿಂದ ಸೆಪ್ಟೆಂಬರ್ 29 ರವರೆಗೆ ಮಾತ್ರ ಇರಲಿದೆ. ಇದರೊಂದಿಗೆ ಪ್ರೇಕ್ಷಕರು ಈ ಸಿನಿಮಾವನ್ನು ಮತ್ತೊಮ್ಮೆ ನೋಡುವ ಆಸಕ್ತಿ ತೋರಲಿದ್ದಾರೆ ಎಂಬುದು ಚಿತ್ರತಂಡದ ಆಶಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!