ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯ ರಷ್ಯಾದ ಇಜ್ಹ್ವೆನ್ಸ್ಕ್ ಶಾಲೆಯೊಂದರಲ್ಲಿ ಬಂದೂಕುದಾರಿಯೊಬ್ಬ ದಾಳಿ ನಡೆಸಿದ್ದು, ಆರು ಮಂದಿ ಮೃತಪಟ್ಟಿದ್ದಾರೆ.
ಬಂದೂಕುಧಾರಿಯೊಬ್ಬ ಶಾಲೆಗೆ ಏಕಾಏಕಿ ನುಗ್ಗಿದ್ದು, ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದ್ದಾನೆ. ಇಬ್ಬರು ಸೆಕ್ಯುರಿಟಿ ಗಾರ್ಡ್ಗಳು, ಇಬ್ಬರು ಶಿಕ್ಷಕರು ಹಾಗೂ ಐವರು ಮಕ್ಕಳು ಮೃತಪಟ್ಟಿದ್ದಾರೆ.
ದಾಳಿಗೆ ಕಾರಣ ತಿಳಿದಿಲ್ಲ, ಗುಂಡು ಹಾರಿಸಿದಾತ ಕೂಡ ತನ್ನ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.