ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಹಿ ಭಕ್ಷ್ಯ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ! ಅಬಾಲ ವೃದ್ಧರಾದಿಯಾಗಿ ಬಹುತೇಕ ಮಂದಿ ಸಿಹಿ ಇಷ್ಟ ಪಟ್ಟು ತಿನ್ನುತಾರೆ. ಹೆಚ್ಚಾಗಿ ಬ್ರಾಹ್ಮಣರ ಮನೆಯಲ್ಲಿ ಅನಾದಿ ಕಾಲದಿಂದಲೂ ಪ್ರಚಲಿತದಲ್ಲಿರುವ ಈ ಭಕ್ಷ್ಯ `ಎವರ್ ಗ್ರೀನ್’ ಎಂಬಂತೆ ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿದೆ.
ಒಮ್ಮೆ ತಿಂದರೆ ಮತ್ತೊಮ್ಮೆ ತಿನ್ನಬೇಕೆಂಬಂತೆ ಮಾಡುವ ಅದ್ಭುತ ರುಚಿಯ ಸಿಹಿ ಭಕ್ಷ್ಯ ಈ `ಹಯಗ್ರೀವ’!
ಬೇಕಾಗುವ ಸಾಮಾಗ್ರಿ:
ಕಡಲೆ ಬೇಳೆ ಕಾಲು ಕೆಜಿ, ಬೆಲ್ಲ ಕಾಲು ಕೆಜಿ, ತುಪ್ಪ ಸ್ವಲ್ಪ, ಗೋಡಂಬಿ ಸ್ವಲ್ಪ, ಒಣ ದ್ರಾಕ್ಷಿ ಸ್ವಲ್ಪ, ಒಣ ಕೊಬ್ಬರಿ ತುರಿ ಒಂದ ಕಪ್, ಏಲಕ್ಕಿ ಪುಡಿ, ಹುರಿದ ಗಸಗಸೆ ಪುಡಿ ಎರಡು ಟೀ ಸ್ಪೂನ್
ಮಾಡುವ ವಿಧಾನ:
ಕಡಲೆ ಬೇಳೆಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಸಣ್ಣ ಉರಿಯಲ್ಲಿರುವಾಗಲೇ ಅಚ್ಚುಬೆಲ್ಲವನ್ನು ಪುಡಿಮಾಡಿ ಬೇಯಿಸಿದ ಕಡಲೆ ಬೇಳೆಗೆ ಸೇರಿಸಿಕೊಳ್ಳಿ. ಗೋಡಂಬಿಯನ್ನು ತುಪ್ಪದಲ್ಲಿ ಕರಿದು ಸೇರಿಸಿ. ದ್ರಾಕ್ಷಿಯನ್ನು ಫ್ರೈಮಾಡಿ ಸೇರಿಸಿ, ಒಂದು ಕಪ್ ಒಣಕೊಬ್ಬರಿ ತುರಿಯನ್ನು ಇದೇ ಪಾಕಕ್ಕೆ ಸೇರಿಸಿ ಚೆನ್ನಾಗಿ ಗೊಟಾಯಿಸಿ. ಏಲಕ್ಕಿ ಪುಡಿ ಹಾಗೂ ಸ್ವಲ್ಪ ತುಪ್ಪ ಹಾಕಿ ಸರಿಯಾಗಿ ಮಿಶ್ರಣಮಾಡಿಕೊಳ್ಳಿ. ಸಂಪೂರ್ಣ ನೀರು ಇಂಗಿ ದಪ್ಪವಾಗುತ್ತಿದ್ದಂತೆಯೇ ಗಸಗಸೆ ಪುಡಿ ಸೇರಿಸಿ ಮಿಶ್ರ ಮಾಡಿ ಕೆಳಗಿಳಿಸಿಕೊಳ್ಳಿ. ರುಚಿ ರುಚಿಯಾದ ಹಯಗ್ರೀವ ರೆಡಿ!. ನೀವೂ ಮಾಡಿ ನೋಡಿ.