ಬ್ರಹ್ಮೋಸ್‌ ಕ್ಷಿಪಣಿಯ ಪ್ರಯೋಗಾರ್ಥ ಉಡಾವಣೆ ಯಶಸ್ವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಭಾರತದ ನೌಕಾಪಡೆಯು ಬ್ರಹ್ಮೋಸ್‌ ಕ್ಷಿಪಣಿಯ ಪ್ರಯೋಗಾರ್ಥ ಉಡಾವಣೆ (BrahMos Missile Test) ಯಶಸ್ವಿಯಾಗಿ ನಡೆದಿದೆ.

ಡಿಆರ್‌ಡಿಒ ಅಭಿವೃದ್ಧಿಪಡಿಸಿದ ದೇಶೀಯ ಸೀಕರ್‌ ಹಾಗೂ ಬೂಸ್ಟರ್‌ಗಳೊಂದಿಗೆ ಕ್ಷಿಪಣಿಯನ್ನು ಅರಬ್ಬೀ ಸಮುದ್ರದಲ್ಲಿ ಯಶಸ್ವಿಯಾಗಿ ಉಡಾವಣೆಗೊಳಿಸಲಾಯಿತು.

ಕೋಲ್ಕೊತಾ ಕ್ಲಾಸ್‌ ಗೈಡೆಡ್‌ ಕ್ಷಿಪಣಿ ನಿಗ್ರಹ ಯುದ್ಧನೌಕೆಯ ಮೂಲಕ ಬ್ರಹ್ಮೋಸ್‌ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದೆ. ಯಶಸ್ವಿ ಪ್ರಯೋಗದಿಂದ ಭಾರತವು ಆತ್ಮನಿರ್ಭರತೆ ಸಾಧಿಸಲು ನೌಕಾಪಡೆಯ ಬದ್ಧತೆಯು ದ್ವಿಗುಣಗೊಂಡಂತಾಗಿದೆ ಎಂದು ನೌಕಾಪಡೆ ತಿಳಿಸಿದೆ.
ಕಳೆದ ತಿಂಗಳು ಎಲ್‌ಸಿಎ ತೇಜಸ್‌ ಹಾಗೂ ಮಿಗ್‌-29 ಕೆ ಯುದ್ಧವಿಮಾನಗಳನ್ನು ಐಎನ್‌ಎಸ್‌ ವಿಕ್ರಾಂತ್‌ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!