Thursday, March 30, 2023

Latest Posts

ಹೆಚ್3ಎನ್2 ವೈರಸ್ ಆತಂಕ: ಮುಂಜಾಗ್ರತೆ ವಹಿಸುವಂತೆ ಅರೋಗ್ಯ ಇಲಾಖೆ ಸೂಚನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ದೇಶದಲ್ಲಿ ಹೆಚ್3ಎನ್2 ವೈರಸ್ (H3N2 virus) ಆತಂಕ ಮನೆ ಮಾಡಿದ್ದೂ, ರಾಜ್ಯಗಳಿಗೆ ಕೇಂದ್ರದಿಂದ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ.

ಕೊರೋನಾ ಬಳಿಕ ಇದೀಗ ಹೆಚ್3ಎನ್2 ರೂಪದಲ್ಲಿ ಮತ್ತೊಂದು ವೈರಸ್ ದೇಶದ ಜನರಿಗೆ ಕಂಟಕವಾಗಿ ಕಾಡುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆಗೆ ಕೇಂದ್ರದಿಂದ ಸಂದೇಶ ರವಾನೆಯಾಗಿದೆ. ಅದೇ ರೀತಿ ಮಾರ್ಚ್ 6ರಂದು ಆರೋಗ್ಯ ಇಲಾಖೆ ಮಹತ್ವದ ಸಭೆ ನಡೆಸಲಿದೆ ಎಂದು ಮಾಹಿತಿ ನೀಡಿದೆ.

ರಾಜ್ಯದಲ್ಲೂ ಆರೋಗ್ಯ ಇಲಾಖೆಯಿಂದ ಹೆಚ್3ಎನ್2 ವೈರಸ್ ಗಂಭೀರತೆ ಮತ್ತು ಪರಿಣಾಮದ ಬಗ್ಗೆ ಸೋಮವಾರ ಮಹತ್ವದ ಸಭೆ ನಡೆಯಲಿದ್ದು, ಆರೋಗ್ಯ ಸಚಿವ ಡಾ.ಸುಧಾಕರ್ (Dr. Sudhakar K) ನೇತೃತ್ವದಲ್ಲಿ ತಜ್ಞರ ಜೊತೆಗೆ ಸಭೆ ನಡೆಯಲಿದೆ. ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಈ ಕುರಿತು ಗಮನ ಕೊಡುವಂತೆ ತಿಳಿಸಿರುವುದರಿಂದ ಹೆಚ್ಚಿನ ನಿಗಾವಹಿಸುವುದು ಅತೀ ಅಗತ್ಯ ಎಂದು ಡಾ. ಸುಧಾಕರ್ ತಿಳಿಸಿದ್ದಾರೆ.

ಪ್ರಸ್ತುತ ಲಭ್ಯವಾಗಿರುವ ಮಾಹಿತಿ ಪ್ರಕಾರ ದೀರ್ಘ ಕಾಲದ ಕೆಮ್ಮು ಈ ವೈರಸ್‌ನ ಪ್ರಮುಖ ಗುಣಲಕ್ಷಣ ಎಂದು ಪ್ರಾರಂಭಿಕ ಪ್ರಕರಣದಲ್ಲಿ ತಿಳಿದು ಬಂದಿದೆ. ಇದನ್ನು ಹೊರತುಪಡಿಸಿ ವಾಕರಿಕೆ, ವಾಂತಿ, ಗಂಟಲು ನೋವು, ಸ್ನಾಯು ಸೆಳೆತ ಸಮಸ್ಯೆ ಕೂಡ ಕಂಡು ಬರಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!