Sunday, December 10, 2023

Latest Posts

ಹೇಗಿದೆ ಗೊತ್ತಾ ‘ಬ್ರಹ್ಮಾಸ್ತ್ರʼದ ಹೊಸ ಟೀಸರ್‌, ಯಾರೆಲ್ಲಾ ಇದ್ದಾರೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ʼಕೇಸರಿಯಾ ತೇರಾ ಇಶ್ಕ್‌ ಹೇ ಪ್ರಿಯಾʼ ಅಂತ ಹಾಡು ಹೇಳಿ ಇತ್ತೀಚೆಗಷ್ಟೇ ಮದುವೆಯಾಗಿದ್ದ ರಣಬೀರ್‌-ಆಲಿಯಾ ಜೋಡಿಯ ಮೊದಲ ಸಿನೆಮಾ ʼಬ್ರಹ್ಮಾಸ್ತ್ರʼ ಈಗಾಗಲೇ ಸಿನಿ ಪ್ರಿಯರಲ್ಲಿ ಕುತೂಹಲ ಹುಟ್ಟು ಹಾಕಿದೆ. ʼಒಂದು ಹೊಸ ಸೂಪರ್‌ ಹೀರೋʼ ನಿರೀಕ್ಷೆಯಲ್ಲಿದ್ದವರಿಗೆ ನೂತನ ದೇಸೀ ಸೂಪರ್‌ ಹೀರೋ ಅವತಾರದಲ್ಲಿ ರಣಬೀರ್‌ ಕಪೂರ್‌ ಅವರನ್ನು ನೋಡಿ ಬಹಳಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ.

ಭಾರತೀಯ ನೋಡುಗರಿಗೆ ಮಲ್ಟಿವರ್ಸ್‌ ಗಳ ಬದಲಾಗಿ ಪೌರಾಣಿಕ ಹಿನ್ನೆಲೆಯಲ್ಲಿ ಚಿತ್ರ ನಿರ್ಮಿಸಿದರೆ ಪ್ರೇಕ್ಷಕರು ಬೇಗ ಕನೆಕ್ಟ್‌ ಆಗುತ್ತಾರೆ ಎಂದು ಚಿತ್ರದ ನಿರ್ದೇಶಕ-ನಿರ್ಮಾಪಕರು ಶಿವ, ಬ್ರಹ್ಮಾಸ್ತ್ರ, ಸೃಷ್ಟಿ ಇತ್ಯಾದಿಗಳನ್ನು ಚಿತ್ರಿಸಿದ್ದಾಗಿರಬಹುದು ಎಂಬುದು ಹಿಂದಿನ ಟಿಸರ್‌ ನಲ್ಲೇ ರಿವೀಲ್‌ ಆಗಿತ್ತು. ಆದರೆ ಇದೀಗ ಬಿಟ್ಟಿರುವ ಹೊಸ ಟೀಸರ್‌ ನೋಡುಗರನ್ನು ಬೆರಗುಗೊಳಿಸಿದೆ. ಏಕೆಂದರೆ ಇದೊಂದು ಮಲ್ಟಿ ಸ್ಟಾರ್‌ ಸಿನಿಮಾ ಆಗಿ ಹೊರಹೊಮ್ಮಿದೆ.

ಮೊದಲು ಕೇವಲ ಆಲಿಯಾ-ರಣಬೀರ್‌ ಇಬ್ಬರನ್ನೇ ತೋರಿಸಿದ್ದ ಚಿತ್ರತಂಡ ಈಗ ಉಳಿದ ಮೂವರು ಸ್ಟಾರ್‌ ಗಳ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದೆ. ಬಿಗ್‌ ಬಿ ಅಮಿತಾಭ್‌ ಬಚ್ಚನ್‌, ಟಾಲಿವುಡ್‌ನ ನಾಗಾರ್ಜುನ ಅಕ್ಕಿನೇನಿ, ಬೆಂಗಾಲಿ ಬೆಡಗಿ ಮೌನಿ ರಾಯ್‌ ಗಳು ಈ ಚಿತ್ರದಲ್ಲಿ ಇರಲಿದ್ದಾರೆ ಎಂಬುದರ ಸಣ್ಣ ಝಲಕ್‌ ಹೊಂದಿರುವ 32ಸೆಕೆಂಡ್‌ ಗಳ ಟೀಸರ್‌ ನೋಡುಗರಿಗೆ ಶಾಕ್‌ ನೀಡಿದ್ದಲ್ಲದೇ ನೂರಾರು ಕೌತುಕಗಳನ್ನು ಹುಟ್ಟು ಹಾಕಿದೆ. ಅಮಿತಾಭ್‌ ಮತ್ತು ನಾಗಾರ್ಜುನ ಅವರು ಶಿವನಾಗಿರೋ ರಣಬೀರ್‌ ಕಪೂರ್‌ ಗೆ ಸಹಾಯ ಮಾಡುವವರಾಗುತ್ತಾರಾ? ಮಾರ್ವೆಲ್‌ನ ವಾಂಡಾ ವಿಷನ್‌ ಗೆ ಒಂಚೂರು ಹೋಲಿಕೆಯಾಗುವ ಮೌನಿ ರಾಯ್‌ ವಿಲನ್‌ ಆಗಲಿದ್ದಾರಾ ಎಂಬುದನ್ನು ಚಿತ್ರವೇ ಹೇಳಲಿದೆ. ಅದಕ್ಕಾಗಿ ಕಾಯಲೇ ಬೇಕು.

ಧರ್ಮ ಪ್ರೋಡಕ್ಷನ್ಸ್‌ ನಿರ್ಮಿಸಿರೋ ಈ ಚಿತ್ರ ಇದೇ ಸೆಪ್ಟೆಂಬರ್‌ 9 ರಂದು ಬಿಡುಗಡೆಯಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!