VIRAL VIDEO| ಡಿಜೆ ವಿಚಾರವಾಗಿ ವಾಗ್ವಾದ: ಮದುವೆ ಸಂಭ್ರಮದಲ್ಲಿದ್ದವರ ಮೇಲೆ ಹಲ್ಲೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಂತೋಷವಾಗಿರಬೇಕಾದ ಮದುವೆಯ ಆಚರಣೆಗಳು ಕೆಲವೊಮ್ಮೆ ಘರ್ಷಣೆಗಳನ್ನು ಉಂಟುಮಾಡುತ್ತವೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಜಗಳ ನಡೆದಿದೆ. ಈ ಸಂದರ್ಭದಲ್ಲಿ ಮದುವೆಗೆ ಬಂದಿದ್ದ ಅತಿಥಿಗಳು ಹಾಗೂ ಹೋಟೆಲ್ ಸಿಬ್ಬಂದಿ ಪರಸ್ಪರ ಹಲ್ಲೆ ನಡೆಸಿದ್ದಾರೆ.

ಪೊಲೀಸರ ಪ್ರಕಾರ, ಗಾಜಿಯಾಬಾದ್ ಮಸ್ಸೂರಿ ಪ್ರದೇಶದ ಕುಟುಂಬವೊಂದು ಮದುವೆ ಸಮಾರಂಭವನ್ನು ಆಯೋಜಿಸಿತ್ತು. ವರನ ಮನೆಯವರು ಇದಕ್ಕಾಗಿ ಗೋವಿಂದ್ ಪುರಿಯಲ್ಲಿರುವ ಗ್ರ್ಯಾಂಡ್ ಐರಿಸ್ ಹೋಟೆಲ್ ಅನ್ನು ಬುಕ್ ಮಾಡಿದ್ದಾರೆ. ಶನಿವಾರ ಸಂಜೆ ಅಲ್ಲಿನ ಹೋಟೆಲ್ ನಲ್ಲಿ ಮೆಹಂದಿ ಸಮಾರಂಭ ನಡೆಯಿತು. ಆದರೆ, ಮಧ್ಯರಾತ್ರಿ 02.00 ಗಂಟೆಗೆ ಹೋಟೆಲ್‌ನಲ್ಲಿ ಡಿಜೆ ನಿಲ್ಲಿಸಲಾಯಿತು. ಇದಕ್ಕೆ ಮದುವೆಗೆ ಬಂದಿದ್ದ ಅತಿಥಿಗಳು ಆಕ್ಷೇಪ ವ್ಯಕ್ತಪಡಿಸಿದರು. ಸ್ವಲ್ಪ ಹೊತ್ತು ಡಿಜೆ ಹಾಕಿ ಅಂದಿದ್ದಕ್ಕೆ ಹೋಟೆಲ್ ಸಿಬ್ಬಂದಿ ನಿರಾಕರಿಸಿದರು. ಈ ವೇಳೆ ಹೋಟೆಲ್ ಸಿಬ್ಬಂದಿ ಹಾಗೂ ಅತಿಥಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ವಾಗ್ವಾದ ಪರಸ್ಪರ ಹಲ್ಲೆಗೆ ಕಾರಣವಾಯಿತು. ಅದರಲ್ಲೂ ಹೋಟೆಲ್ ಸಿಬ್ಬಂದಿ ಹಾಗೂ ಬೌನ್ಸರ್ ಗಳು ವರ ಹಾಗೂ ಆತನ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಮದುವೆ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಇದುವರೆಗೆ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. ಹಾಗೂ ಕೆಲವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!