Thursday, March 23, 2023

Latest Posts

ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವೈಭವದ ರೋಡ್​ಶೋ ಪ್ರಾರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಶಿವಮೊಗ್ಗದ ಕಾರ್ಯಕ್ರಮದ ಬಳಿಕ ಬೆಳಗಾವಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದು,
ಕುಂದಾನಗರಿಯ ವೈಭವದ ರೋಡ್​ ಶೋ ಆರಂಭಿಸಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮ ರೋಡ್​ಶೋ ಆರಂಭವಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್​ನಲ್ಲಿ ಪ್ರಧಾನಿ ಮೋದಿ ರೋಡ್​ಶೋ ನಡೆಸುತ್ತಿದ್ದಾರೆ.

ಚೆನ್ನಮ್ಮ ವೃತ್ತದಿಂದ ಸುಮಾರು 10.7 ಕಿ.ಮೀ. ರೋಡ್​ಶೋ ನಡೆಯಲಿದೆ. ಕಾಲೇಜು ಮಾರ್ಗವಾಗಿ ಸಂಭಾಜಿ ವೃತ್ತ, ಕಿರ್ಲೋಸ್ಕರ್ ರಸ್ತೆ, ಶನಿ ಮಂದಿರ, ಕಪಿಲೇಶ್ವರ ದೇವಸ್ಥಾನ ರಸ್ತೆ, ಶಿವಾಜಿ ಗಾರ್ಡನ್, ಓಲ್ಡ್ ಪಿಬಿ ರೋಡ್ ಮಾರ್ಗವಾಗಿ ಪ್ರಧಾನಿ ಮಾಲಿನಿ ಸಿಟಿಯಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶಕ್ಕೆ ಆಗಮಿಸಲಿದ್ದಾರೆ.

ರಸ್ತೆಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಮೋದಿ ಪರವಾಗಿ ಜೈಕಾರ ಕೂಗುತ್ತಿದ್ದಾರೆ. ಎಲ್ಲೆಡೆ ಕೇಸರಿ ಬಾವುಟ ರಾರಾಜಿಸುತ್ತಿದ್ದು, ಜಾನಪದ ಕಲಾತಂಡಗಳ ಪ್ರದರ್ಶನ ಮನಸೆಳೆಯುತ್ತಿದೆ.

ತಮ್ಮ ವಾಹನದಲ್ಲಿ ಚಾಲಕರ ಪಕ್ಕದ ಮುಂದಿನ ಸಾಲಿನಲ್ಲಿ ನಿಂತಿರುವ ಪ್ರಧಾನಿಗಳು ಜನರತ್ತ ಕೈಬೀಸಿ ಮುಂದೆ ಸಾಗುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!