July 6, 2026
Monday, July 6, 2026
spot_img

ಬ್ರೆಝಿಲ್ ವಿಶ್ವಕಪ್ ಕನಸು ಭಗ್ನ: ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಇತಿಹಾಸ ಸೃಷ್ಟಿಸಿದ ನಾರ್ವೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫಿಫಾ ವಿಶ್ವಕಪ್‌ನ ರೌಂಡ್ ಆಫ್-16 ನಾಕೌಟ್ ಪಂದ್ಯದಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಬ್ರೆಜಿಲ್ ಆಘಾತಕಾರಿ ಸೋಲು ಕಂಡಿದೆ. ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ರೋಮಾಂಚಕ ಹಣಾಹಣಿಯಲ್ಲಿ ನಾರ್ವೆ ತಂಡವು 2-1 ಗೋಲುಗಳ ಅಂತರದಿಂದ ಬ್ರೆಜಿಲ್‌ಗೆ ಶಾಕ್ ನೀಡಿದೆ. ಇದರೊಂದಿಗೆ ಬ್ರೆಜಿಲ್‌ನ ವಿಶ್ವಕಪ್ ಕನಸು ನುಚ್ಚುನೂರಾಗಿದೆ.

ಹಾಲಂಡ್ ರಣತಂತ್ರ, ಲಯ ತಪ್ಪಿದ ಬ್ರೆಜಿಲ್

ನೇಮಾರ್, ವಿನೀಶಿಯಸ್, ಎಂಡ್ರಿಕ್ ಅಂತಹ ಬಲಿಷ್ಠ ಮುನ್ಪಡೆ ಹೊಂದಿದ್ದರೂ ಬ್ರೆಜಿಲ್ ತಡಬಡಾಯಿಸಿತು. ಮೊದಲಾರ್ಧದಲ್ಲಿ ರಕ್ಷಣಾತ್ಮಕ ಆಟವಾಡಿದ ನಾರ್ವೆ, ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಶೈಲಿಗೆ ಬದಲಾಯಿತು. ನಾರ್ವೆಯ ತಾರೆ ಎರ್ಲಿಂಗ್ ಹಾಲಂಡ್ 79ನೇ ಮತ್ತು 90ನೇ ನಿಮಿಷದಲ್ಲಿ ಬ್ಯಾಕ್-ಟು-ಬ್ಯಾಕ್ ಎರಡು ಅದ್ಭುತ ಗೋಲು ಸಿಡಿಸಿ ಬ್ರೆಜಿಲ್‌ನ ಸೋಲನ್ನು ಖಚಿತಪಡಿಸಿದರು.

ಪೆನಾಲ್ಟಿ ಕೈಚೆಲ್ಲಿದ ಸಾಂಬಾ ಕಿಂಗ್ಸ್

ಬ್ರೆಜಿಲ್‌ಗೆ 13ನೇ ನಿಮಿಷದಲ್ಲೇ ಪೆನಾಲ್ಟಿ ಮೂಲಕ ಗೋಲು ಗಳಿಸುವ ಸುವರ್ಣ ಅವಕಾಶವಿತ್ತು. ಆದರೆ ಬ್ರೂನೋ ಗಿಮರೇಶ್ ಹೊಡೆದ ಕಿಕ್ ಅನ್ನು ನಾರ್ವೆ ಗೋಲ್‌ಕೀಪರ್ ಓರ್ಜಾನ್ ನೈಲ್ಯಾಂಡ್ ಅದ್ಭುತವಾಗಿ ತಡೆದರು. ಇಂಜುರಿ ಟೈಮ್‌ನಲ್ಲಿ (90+10ನೇ ನಿಮಿಷ) ನೇಮಾರ್ ಜೂನಿಯರ್ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದರೂ, ಅದು ಕೇವಲ ಸೋಲಿನ ಅಂತರವನ್ನು ತಗ್ಗಿಸಿತಷ್ಟೇ.

36 ವರ್ಷಗಳ ದಾಖಲೆ ಬ್ರೇಕ್

ಕೊನೆಯದಾಗಿ 1990ರಲ್ಲಿ ಕ್ವಾರ್ಟರ್ ಫೈನಲ್‌ಗೆ ಮುನ್ನವೇ ಹೊರಬಿದ್ದಿದ್ದ ಬ್ರೆಜಿಲ್, ಇದೀಗ 36 ವರ್ಷಗಳ ಬಳಿಕ ಮತ್ತೆ ರೌಂಡ್ ಆಫ್-16 ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದು ಮುಖಭಂಗ ಅನುಭವಿಸಿದೆ. ನಾರ್ವೆ ತಂಡವು ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !