ಪಣಸೋಲಿ ವನ್ಯ ಜೀವಿ ವಿಭಾಗದಲ್ಲಿ ಜಂಗಲ್ ಸಫಾರಿಗೆ ಬ್ರೇಕ್!

ಹೊಸದಿಗಂತ ವರದಿ ಜೊಯಿಡಾ :

ಕಾಳಿ ಹುಲಿ ಸಂರಕ್ಷಿತ ಪ್ರದೇಶ ಪಣಸೋಲಿ ವನ್ಯ ಜೀವಿ ವಿಭಾಗದಲ್ಲಿ ಸೋಮವಾರದಿಂದ ಜಂಗಲ್ ಸಫಾರಿ ತಾತ್ಕಾಲಿಕವಾಗಿ ಮುಂದಿನ ಆದೇಶ ಬರುವ ವರೆಗೆ ಸ್ಥಗಿತಗೊಳಿಸಲಾಗಿದೆ. ಎಂದು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆಯ ಕಾರಣ ಈ ಕ್ರಮ ಕೈಕೊಳ್ಳಲಾಗುತ್ತಿದೆ. ಜಂಗಲ್ ಸಫಾರಿಯನ್ನು ಪಣಸೋಲಿ ಪರಿಸರ ಅಭಿವೃದ್ಧಿ ಸಮಿತಿ , ಕಾಳಿಹುಲಿ ಯೋಜನೆಯ ನಿರ್ದೇಶನದಂತೆ ನಡೆಸುತ್ತಿದ್ದು, ಪ್ರವಾಸಿಗರ ಹಿತದೃಷ್ಟಿಯಿಂದ ಕೈ ಕೊಳ್ಳಬೇಕಾದ ಕೆಲವು ಅಗತ್ಯ ಕ್ರಮಗಳನ್ನು ಕೈ ಕೊಳ್ಳಬೇಕಾಗಿರುವ ಕಾರಣ ಜಂಗಲ್ ಸಫಾರಿಯನ್ನು ಮೇ 29 ರಿಂದ ಮುಂದಿನ ಆದೇಶ ಆಗುವ ವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ಪ್ರಕಟಿಸುತ್ತಾರೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!