ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಐಶ್ವರ್ಯಾ ರೈ ಸಂಸಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ನಾನಾ ವದಂತಿಗಳ ನಡುವೆ ಅಭಿಷೇಕ್ ಬಚ್ಚನ್ ಜೊತೆ ಐಶ್ವರ್ಯಾ ರೈ ದುಬೈನಲ್ಲಿ ವೆಕೇಷನ್‌ನಲ್ಲಿರುವ ವಿಡಿಯೋ ವೈರಲ್ಮೂಆಗಿದ್ದು, ಈ ಮೂಲಕ ಡಿವೋರ್ಸ್ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.
ಪ್ರತಿ ಬಾರಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕಾಗಿದೆ ಎಂಬ ಸುದ್ದಿ ಗಾಸಿಪ್ ಮಂದಿಯ ಬಾಯಿಗೆ ಆಹಾರವಾಗುತ್ತಲೇ ಇರುತ್ತದೆ. ಆದರೆ ಇದುವರೆಗೂ ಈ ಬಗ್ಗೆ ಇಬ್ಬರೂ ಸ್ಪಷ್ಟನೆ ನೀಡುವ ಕೆಲಸ ಮಾಡಿರಲಿಲ್ಲ. ಇದೀಗ ದುಬೈನಲ್ಲಿ ಮಗಳು ಮತ್ತು ಪತ್ನಿಯೊಡನೆ ಅಭಿಷೇಕ್ ವೆಕೇಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮೂವರು ಜೊತೆಯಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಇತ್ತೀಚೆಗೆ ಅಂಬಾನಿ ಮನೆ ಮಗನ ಮದುವೆಯಲ್ಲಿ ಅಭಿಷೇಕ್ ಬಚ್ಚನ್ ಕುಟುಂಬದ ಜೊತೆ ನಟಿ ಕಾಣಿಸಿಕೊಳ್ಳದೆ ಮಗಳ ಜೊತೆ ಬಂದು ಕ್ಯಾಮೆರಾ ಪೋಸ್ ನೀಡಿದ್ದರು. ಈ ಮದುವೆಯ ನಂತರ ಮಗಳು ಆರಾಧ್ಯಾ ಜೊತೆ ನ್ಯೂಯಾರ್ಕ್ ವೆಕೇಷನ್‌ಗೆ ನಟಿ ತೆರಳಿದ್ದರು. ಆಗ ಅಭಿಷೇಕ್ ಇವರ ಜೊತೆ ಇಲ್ಲದೇ ಇರೋದು ಡಿವೋರ್ಸ್ ವದಂತಿಗೆ ಪುಷ್ಠಿ ನೀಡಿತ್ತು.