ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಎರಡು ದಿನಗಳ ಬ್ರೂನೆ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಅಲ್ಲಿ ಭಾರತೀಯ ವಲಸಿಗರು ಅದ್ದೂರಿಯಾಗಿ ಸ್ವಾಗತಿಸಿದರು.
ಪ್ರಧಾನಿ ಮೋದಿ ಅವರು ಬ್ರೂನೆ ರಾಜಧಾನಿ ಬಂದರ್ ಸೆರಿ ಬೆಗವಾನ್‌ನಲ್ಲಿರುವ ಭವ್ಯ ಹೋಟೆಲ್‌ಗೆ ಆಗಮಿಸಿದರು. ಅಲ್ಲಿ ವಿವಿಧ ಪ್ರದೇಶಗಳ ಭಾರತೀಯ ವಲಸಿಗರು ಮೋದಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ಅಲ್ಲಿ ಸೇರಿದ್ದ ಭಾರತೀಯರಿಗೆ ಹಸ್ತಲಾಘವ ಮಾಡಿ ಭಾರತೀಯ ವಲಸಿಗರೊಂದಿಗೆ ಮೋದಿ ಮಾತನಾಡಿದರು. ಪ್ರಧಾನಿ ಮೋದಿಯನ್ನು ನೋಡಿ ಸಂತಸಗೊಂಡ ಮಕ್ಕಳು ಸೆಲ್ಫೀ ಕ್ಲಿಕ್ಕಿಸಿಕೊಂಡು, ಆಟೋಗ್ರಾಫ್ ಪಡೆದು ಖುಷಿ ಪಟ್ಟರು.