September 28, 2026
Monday, September 28, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 1 | ಮಳೆಗಾಲದ ಸಿಹಿ ಸವಿರುಚಿ: ಮನೆಯಲ್ಲೇ ಮಾಡಿ ಹಲಸಿನ ಹಣ್ಣಿನ ಇಡ್ಲಿ

ಕರಾವಳಿ ಕರ್ನಾಟಕದ ಅಡುಗೆ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಹೊಂದಿರುವ ಹಲಸಿನ ಹಣ್ಣಿನ ಇಡ್ಲಿ ಆರೋಗ್ಯಕರ ಉಪಾಹಾರಗಳಲ್ಲಿ ಒಂದಾಗಿದೆ. ಮಾಗಿದ ಹಲಸಿನ ಹಣ್ಣಿನ ಸುವಾಸನೆ, ಬೆಲ್ಲದ ಸಿಹಿ ಮತ್ತು ತೆಂಗಿನಕಾಯಿಯ ರುಚಿ ಸೇರಿ ಈ ತಿನಿಸಿಗೆ ವಿಶಿಷ್ಟ ಸವಿಯನ್ನು ನೀಡುತ್ತವೆ.

ಬೇಕಾಗುವ ಪದಾರ್ಥಗಳು

ಹಲಸಿನ ಹಣ್ಣಿನ ತೊಳೆಗಳು – 20 ರಿಂದ 25
ಅಕ್ಕಿ ರವೆ (ಇಡ್ಲಿ ರವೆ) – 1 ಕಪ್
ಬೆಲ್ಲ – ¾ ಕಪ್
ತುರಿದ ತೆಂಗಿನಕಾಯಿ – ½ ಕಪ್
ಏಲಕ್ಕಿ ಪುಡಿ – ½ ಟೀಸ್ಪೂನ್
ಉಪ್ಪು – ಚಿಟಿಕೆ

ಅಕ್ಕಿ ರವೆಯನ್ನು ಒಂದು ಪಾತ್ರೆಯಲ್ಲಿ ಹಾಕಿ ಸ್ವಲ್ಪ ನೀರು ಸೇರಿಸಿ ಸುಮಾರು 15 ನಿಮಿಷಗಳ ಕಾಲ ನೆನೆಸಿಡಿ. ಇದರಿಂದ ಕಡುಬು ಮೃದುವಾಗಿ ಬರುತ್ತದೆ.

ಮಿಕ್ಸಿ ಜಾರ್‌ಗೆ ಹಲಸಿನ ಹಣ್ಣಿನ ತೊಳೆಗಳು, ಬೆಲ್ಲ, ತುರಿದ ತೆಂಗಿನಕಾಯಿ ಮತ್ತು ಏಲಕ್ಕಿ ಪುಡಿ ಹಾಕಿ ನೀರು ಸೇರಿಸದೇ ನಯವಾಗಿ ರುಬ್ಬಿಕೊಳ್ಳಿ.

ನೆನೆಸಿದ ರವೆಯ ನೀರನ್ನು ಬಸಿದು, ಅದಕ್ಕೆ ರುಬ್ಬಿದ ಮಿಶ್ರಣ ಹಾಗೂ ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿಕೊಳ್ಳಿ.

ಇಡ್ಲಿ ತಟ್ಟೆಗೆ ಸ್ವಲ್ಪ ತುಪ್ಪ ಸವರಿ ಹಿಟ್ಟನ್ನು ಹಾಕಿ 15 ರಿಂದ 20 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಆವಿಯಲ್ಲಿ ಬೇಯಿಸಿ.

ಕರಾವಳಿ ಭಾಗಗಳಲ್ಲಿ ಈ ಕಡುಬನ್ನು ಬಾಳೆ ಎಲೆ ಅಥವಾ ತೇಗದ ಎಲೆಯಲ್ಲಿ ಸುತ್ತಿ ಬೇಯಿಸುವ ಪದ್ಧತಿ ಇದೆ. ಹೀಗೆ ಮಾಡಿದರೆ ಸುವಾಸನೆ ಮತ್ತು ರುಚಿ ಇನ್ನಷ್ಟು ಹೆಚ್ಚಾಗುತ್ತದೆ.

ಬಿಸಿ ಬಿಸಿಯಾದ ಹಲಸಿನ ಹಣ್ಣಿನ ಕಡುಬನ್ನು ತುಪ್ಪದೊಂದಿಗೆ ಸವಿದರೆ ಅದರ ಸವಿಯೇ ಬೇರೆ.

Must Read