ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ಅಧ್ಯಕ್ಷರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್ ವಾಯುವ್ಯ ಇರಾನ್‌ನ ಜೋಲ್ಫಾ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ. ಟರ್ಕಿಯ ರಾಜ್ಯ ಸುದ್ದಿ ಸಂಸ್ಥೆ, ಅನಾಡೊಲು ನ್ಯೂಸ್ ಏಜೆನ್ಸಿಯನ್ನು ಉಲ್ಲೇಖಿಸಿ, ಈ ಸ್ಥಳವನ್ನು ಮಾನವರಹಿತ ವಿಮಾನ (ಯುಎವಿ) ಗುರುತಿಸಿದೆ ಎಂದು ವರದಿ ಮಾಡಿದೆ.
ಪತನಗೊಂಡ ಹೆಲಿಕಾಪ್ಟರ್ ಪತ್ತೆಯಾಗಿದೆ. ಇರಾನ್ ಅಧಿಕಾರಿಗಳ ಪ್ರಕಾರ, ಇರಾನ್‌ನ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದುಲ್ಲಾಹಿಯಾನ್ ಕೂಡ ಘಟನೆಯಲ್ಲಿ ಮೂರ್ತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ಇಬ್ರಾಹಿಂ ರೈಸಿ ಮತ್ತು ಅಜೆರ್ಬೈಜಾನಿ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರು ಗಡಿಯಲ್ಲಿರುವ ಕ್ವಿಜ್ ಖಲಾಸಿ ಅಣೆಕಟ್ಟು ಪೂರ್ಣಗೊಂಡ ನಂತರ ತಬ್ರಿಜ್ ನಗರಕ್ಕೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
#BREAKING: Image of the wreckage of #Iran‘s regime’s president Ebrahim Raisi’s helicopter in pieces. The Butcher of Tehran is dead. pic.twitter.com/JdnxsVK5Zx
— Jason Brodsky (@JasonMBrodsky) May 20, 2024