ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ಲೇಆಫ್‌ಗೆ ವೇದಿಕೆ ಸಿದ್ಧವಾಗಿದೆ. ಎಲ್ಲಾ ನಾಲ್ಕು ತಂಡಗಳನ್ನು ನಿರ್ಧರಿಸಲಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪ್ಲೇಆಫ್ ತಲುಪಿದ ಮೊದಲ ತಂಡವಾಗಿದೆ. ಉಳಿದ ತಂಡಗಳು ಸನ್‌ರೈಸರ್ಸ್ ಹೈದರಾಬಾದ್ (SRH), ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB).
IPL 2024 ಪ್ಲೇ ಆಫ್ ಗಳ ವೇಳಾಪಟ್ಟಿ:
ಕ್ಯಾಲಿಫೈಯರ್ 1:
ಪ್ಲೇಆಫ್‌ನ ಮೊದಲ ಪಂದ್ಯವು ಎರಡು ಬಾರಿಯ ಚಾಂಪಿಯನ್ KKR ಮತ್ತು 2016 ರ ವಿಜೇತರಾದ SRH ನಡುವೆ ನಡೆಯಲಿದೆ.
ದಿನಾಂಕ: ಮೇ 21 ಸಮಯ: 7:30 PM IST | ಸ್ಥಳ: ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
ಎಲಿಮಿನೇಟರ್:
ಎಲಿಮಿನೇಟರ್‌ನಲ್ಲಿ ಪಾಯಿಂಟ್‌ಗಳ ಪಟ್ಟಿಯಲ್ಲಿ 3ನೇ ಮತ್ತು 4ನೇ ಸ್ಥಾನ ಗಳಿಸಿದ ತಂಡಗಳಾದ ಸಂಜು ಸ್ಯಾಟ್ಸನ್ ನೇತೃತ್ವದ ಒಂದು ಬಾರಿಯ ಚಾಂಪಿಯನ್ RR ವಿರುದ್ಧ RCB ಮುಖಾಮುಖಿಯಾಗಲಿದೆ.
ದಿನಾಂಕ: ಮೇ 22 | ಸಮಯ: 7:30 PM IST | ಸ್ಥಳ: ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
ಕ್ಯಾಲಿಫೈಯರ್ 2:
ಕ್ಯಾಲಿಫೈಯರ್ 1 ರಲ್ಲಿ ಸೋತ ತಂಡವು ಕ್ಯಾಲಿಫೈಯರ್ 2 ರ ಮೂಲಕ ಫೈನಲ್ ಗೆ ಅರ್ಹತೆ ಪಡೆಯಲು ಮತ್ತೊಂದು ಅವಕಾಶವನ್ನು ಪಡೆಯುತ್ತದೆ. KKR ಮತ್ತು SRH ಗಳಲ್ಲಿ ಒಬ್ಬರು ಕ್ಯಾಲಿಫೈಯರ್ 2 ರಲ್ಲಿ ಎಲಿಮಿನೇಟರ್(RCB ಅಥವಾ RR) ವಿಜೇತರನ್ನು ಎದುರಿಸುತ್ತಾರೆ. ಈ ಪಂದ್ಯದ ವಿಜೇತರು ಕ್ಯಾಲಿಫೈಯರ್ 1 ರ ವಿಜೇತರನ್ನು ಫೈನಲ್‌ನಲ್ಲಿ ಎದುರಿಸುತ್ತಾರೆ.
ದಿನಾಂಕ: ಮೇ 24 | ಸಮಯ: 7:30 PM IST | ಸ್ಥಳ: ಚೆಪಾಕ್, ಚೆನ್ನೈನಲ್ಲಿ ನಡೆಯಲಿದೆ.
IPL 2024 ಫೈನಲ್:
ಕ್ಯಾಲಿಫೈಯರ್ 1 ಮತ್ತು ಕ್ಯಾಲಿಫೈಯರ್ 2 ರ ವಿಜೇತರ ನಡುವೆ ಈ ಬಾರಿಯ ಐಪಿಎಲ್ ವಿಜೇತರು ಯಾರು ಎಂದು ನಿರ್ಧಾರವಾಗಲಿದೆ. ಪ್ಲೇಆಫ್‌ಗೆ ಅರ್ಹತೆ ಪಡೆದ ನಾಲ್ಕು ತಂಡಗಳಲ್ಲಿ RCB ಮಾತ್ರ ಇನ್ನೂ ಪ್ರಶಸ್ತಿಯನ್ನು ಗೆದ್ದಿಲ್ಲ. ಆರ್.ಸಿ.ಬಿ.ಗೆ ಇದು ನಾಲ್ಕನೇ ಐಪಿಎಲ್ ಫೈನಲ್ ಆಗಿದೆ.
ಫೈನಲ್ ಪಂದ್ಯ ದಿನಾಂಕ: ಮೇ 26 | ಸಮಯ: 7:30 PM IST | ಸ್ಥಳ: ಚೆಪಾಕ್, ಚೆನ್ನೈ