BREAKING NEWS | ಅರುಣಾಚಲ ಪ್ರದೇಶದಲ್ಲಿ ಭೂಕಂಪನ: 3.8 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಅರುಣಾಚಲ ಪ್ರದೇಶದ ಪಶ್ಚಿಮ ಭಾಗದಲ್ಲಿ ಭಾನುವಾರ ಮಧ್ಯಾಹ್ನ ಭೂಕಂಪ ಸಂಭವಿಸಿದೆ. 3.8 ತೀವ್ರತೆ ದಾಖಲಾಗಿದೆ.

ರಾಷ್ಟ್ರೀಯ ಕೇಂದ್ರದ ವರದಿಯ ಪ್ರಕಾರ ಭೂಕಂಪವು ಮಧ್ಯಾಹ್ನ 12.12 ಕ್ಕೆ ಸಂಭವಿಸಿದ್ದು, ಭೂತಾನ್ ಗಡಿಯ ಸಮೀಪವಿರುವ ಪಶ್ಚಿಮ ಕಮೆಂಗ್‌ನಲ್ಲಿ 10 ಕಿ.ಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ.

ಮಧ್ಯ-ಉತ್ತರ ಅಸ್ಸಾಂ ಮತ್ತು ಭೂತಾನ್‌ನ ಪೂರ್ವ ಭಾಗದಲ್ಲಿ ಕಂಪನದ ಅನುಭವವಾಗಿದೆ. ಯಾರಿಗೂ ಗಾಯ ಅಥವಾ ಆಸ್ತಿಪಾಸ್ತಿ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!