BREAKING NEWS | ಸ್ಯಾಂಟ್ರೋ ರವಿ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅನೈತಿಕ ದಂಧೆ ಹಾಗೂ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್‌ ನ ಬಂಧನವಾಗಿದೆ.
ಕಳೆದ 11 ದಿನಗಳಿಂದ ಮೈಸೂರು ಪೊಲೀಸರು ಸ್ಯಾಂಟ್ರೋ ರವಿಗಾಗಿ ಬಲೆ ಬೀಸಿದ್ದರು. ರಾಜ್ಯದ ಮೂಲೆ ಮೂಲೆಗೆ ತೆರಳಿ ವಿಚಾರಣೆ ನಡೆಸಿದ್ದರು. ಇದೀಗ ಗುಜರಾತ್‌ನಲ್ಲಿ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ರವಿ ಫೋನ್ ಹಾಗೂ ಸ್ಯಾಟಲೈಟ್ ಮಾಹಿತಿ ಆಧಾರದ ಮೇಲೆ ಮೈಸೂರು ಪೊಲೀಸರು ಉಡುಪಿ ಸೇರಿದಂತೆ ರಾಜ್ಯದ ಹಲವು ಭಾಗಗಳಿಗೆ ತೆರಳಿ ವಿಚಾರಣೆ ನಡೆಸಿದ್ದರು. ಆದರೆ ಸ್ಯಾಂಟ್ರೋ ರವಿ ಪತ್ತೆಯಾಗಿರಲಿಲ್ಲ.
ಮೈಸೂರಿನಲ್ಲಿ ಫೋನ್ ಸ್ವಿಚ್ ಆಫ್ ಮಾಡಿ ಕಾರಿನಲ್ಲೇ ರಾಜ್ಯದಿಂದ ರಾಜ್ಯಕ್ಕೆ ಸುತ್ತಾಟ ನಡೆಸಿದ್ದ ಸ್ಯಾಂಟ್ರೋ ರವಿ ಜಾಡು ಹಿಡಿದ ಮೈಸೂರು ಪೊಲೀಸರು ಗುಜರಾತ್‌ಗೆ ತೆರಳಿದ್ದರು. ಸಣ್ಣ ಸುಳಿವಿನ ಆಧಾರದ ಮೇಲೆ ತೆರಳಿದ ಪೊಲೀಸರು ಸ್ಯಾಂಟ್ರೋ ರವಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!