ಬಿಗ್ ಬಾಸ್ ಓಟಿಟಿ ಲವ್ ಬರ್ಡ್ಸ್ ಬ್ರೇಕ್ ಆಪ್: ಮೊದಲ ಬಾರಿಗೆ ಮನಸ್ಸಿನ ಮಾತು ಹಂಚಿಕೊಂಡ ನಂದು!

ಹೊಸದಿಗಂತ ಡಿಜಿಟಲ್ ಡೆಸ್ಕ್:

`ರೋಡಿಸ್’ ( ಮೂಲಕ ಪರಿಚವಾಗಿ ಪ್ರೀತಿಸಿ ಆ ಬಳಿಕ ಕನ್ನಡ ಬಿಗ್ ಬಾಸ್ ಓಟಿಟಿ ಯಲ್ಲಿ ಕಾಣಿಸಿಕೊಂಡ ಜೋಡಿ ಅಂದರೆ ಅದು ನಂದು ಮತ್ತು ಜಶ್ವಂತ್.

ದೊಡ್ಮನೆಯಲ್ಲಿ ಕೂಡ ಇವರು ಲವ್ ಬರ್ಡ್ಸ್ ಆಗಿಯೇ ಹೈಲೈಟ್ ಆಗಿದ್ದರು.ಆದ್ರೆ ಅಲ್ಲಿ ಮಾತು ಜಗಳ ಆಗುತ್ತಾ ಕೊನೆಗೆ ಬಿಗ್ ಬಾಸ್ ಶೋ ನಂತರ ಇಬ್ಬರ ಲವ್ ಸ್ಟೋರಿಗೆ ಬ್ರೇಕ್ ಬಿದ್ದಿದೆ ಎನ್ನಲಾಗಿತ್ತು.

ಈ ಬಗ್ಗೆ ಸ್ವತಃ ನಂದು ಮಾತನಾಡಿದ್ದು, ನಾವಿಬ್ಬರು ಒಟ್ಟಿಗೆ ಇದ್ವಿ, ಜೊತೆಗಿದ್ದು, ಇತಿಹಾಸವನ್ನೇ ಸೃಷ್ಟಿಸಿದ್ವಿ. ಜೊತೆಯಲ್ಲಿದ್ದಾಗ ಖುಷಿಯಿಂದ ಜೀವಿಸಿದ್ವಿ. ನಾನು ರಿಲೇಷನ್‌ಶಿಪ್‌ಗೆ ಬರುವಾಗ ಗಿವ್ ಅಪ್ ಮಾಡಬಾರು ಎಂದು ಯೋಚಿಸಿದ್ದೆ, ಆದರೆ ಸಂಬಂಧ ಅಂತ್ಯಗೊಳಿಸುವ (Breakup) ಸಮಯದಲ್ಲಿ ಹಾಗೇ ಇರಲಿಲ್ಲ. ಜಶ್ವಂತ್, ನನಗೆ ಸ್ವಲ್ಪ ಸಮಯ ಬೇಕು ಅಂತಾ ಹೇಳಿದಾಗ ಅವನ ಖುಷಿ ಕೂಡ ನಾನು ಆಯ್ಕೆ ಮಾಡಬೇಕಾಗುತ್ತದೆ. ಅವನ ನಿರ್ಧಾರಕ್ಕೂ ನಾನು ಗೌರವ ಕೊಡಬೇಕಾಗುತ್ತದೆ. ಹಾಗಾಗಿ ನಾನು ಸಮಯ ಕೊಟ್ಟಿದ್ದೀನಿ. ನಾವು ಡಿಸೈಡ್ ಮಾಡಿದ್ದೀವಿ, ನಮ್ಮ ನಮ್ಮ ಲೈಫ್‌ನಲ್ಲಿ ನಾವು ಮೂವ್ ಆನ್ ಆಗಬೇಕು ಅಂತಾ ಎಂದು ಸೋಷಿಯಲ್ ಮೀಡಿಯಾದ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ನಾನು ಯಾವಗಲೂ ಅವರ ಖುಷಿನಾ ಅವರೇ ಚ್ಯೂಸ್ ಮಾಡಲಿ ಅಂತಾ ಬಿಡ್ತೀನಿ. ಸೋ, ಅವನ ಖುಷಿ ಅವನಿಗೆ ಎನು ಬೇಕು ಅನ್ನೋದನ್ನ ಯೋಚನೆ ಮಾಡಿದ್ದಾನೆ. ನನ್ನ ಖುಷಿ ಅಷ್ಟೇ ಮುಖ್ಯ ಆಗಲ್ಲ. ಅವನ ಖುಷಿ ಕೂಡ ಅಷ್ಟೇ ಮುಖ್ಯ. ಈ ಬಗ್ಗೆ ಜಶ್ವಂತ್‌ಗೆ ಎನು ಹೇಳಬೇಡಿ, ಸಮಯ ಬಂದಾಗ ಅವನ ಎನು ಎಂಬುದನ್ನ ಅವನೇ ಪ್ರೂವ್ ಮಾಡುತ್ತಾನೆ ಎಂದು ನಂದು ಬರೆದುಕೊಂಡಿದ್ದಾರೆ.

ಒಬ್ಬ ವ್ಯಕ್ತಿ ನನ್ನ ಜೀವನದಲ್ಲಿ ಇಲ್ಲಾ ಅಂತಾ ನಾನು ಬೇಸರ ಪಟ್ಟುಕೊಳ್ಳಲ್ಲ. ನನ್ನ ಜೀವನದಲ್ಲಿ ಈಗ ಏನೆಲ್ಲಾ ಇದೆ ಅದಕ್ಕೆ ನಾನು ಅಭಾರಿಯಾಗಿರುತ್ತೇನೆ. ಎಲ್ಲದ್ದಕ್ಕಿಂತ್ ಹೆಚ್ಚಾಗಿ ನನ್ನಲ್ಲಿ ಬ್ಯೂಟಿಫುಲ್ ಹಾರ್ಟ್ ಮತ್ತು ನಗು ಇದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಬ್ರೇಕಪ್ (Breakup) ಆಗಿರುವ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!