Tuesday, May 30, 2023

Latest Posts

ಗರ್ಲ್‌ಫ್ರೆಂಡ್ ಜತೆ ಬ್ರೇಕಪ್, ಸಿಟ್ಟಲ್ಲಿ 40 ಲಕ್ಷ ರೂಪಾಯಿ ಕಾರಿಗೆ ಬೆಂಕಿ ಇಟ್ಟ ಯುವಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗರ್ಲ್‌ಫ್ರೆಂಡ್ ಜೊತೆ ಜಗಳ ಆದ್ರೆ ಏನು ಮಾಡೋಕೆ ಸಾಧ್ಯ? ಅತಿರೇಖ ಎಂದರೆ ಕೈಯಲ್ಲಿದ್ದ ಫೋನ್ ಎಸೆಯಬಹುದು. ಆದರೆ ಇಲ್ಲೊಬ್ಬ  ಗರ್ಲ್ ಫ್ರೆಂಡ್ ಜತೆ ಬ್ರೇಕಪ್ ಆಗಿದ್ದಕ್ಕೆ 40 ಲಕ್ಷ ರೂಪಾಯಿ ಕಾರಿಗೆ ಬೆಂಕಿ ಇಟ್ಟಿದ್ದಾನೆ. ಕೆಲವೇ ಗಂಟೆಗಳಲ್ಲಿ ಮರ್ಸಿಡೀಸ್ ಬೆನ್ಝ್ ಸುಟ್ಟು ಕರಕಲಾಗಿದೆ.

ತಮಿಳುನಾಡಿನ ಕಂಚಿಯ 28 ವರ್ಷದ ಯುವಕ ಕೆವಿನ್ ಸ್ಥಳೀಯ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ. ಕಾಲೇಜಿನಲ್ಲಿ ಓದುತ್ತಲೇ ಕೆಲಸವನ್ನೂ ಮಾಡುತ್ತಿದ್ದ ಕೆವಿನ್ ಅದೇ ಕಾಲೇಜಿನ ಯುವತಿಯನ್ನು ಪ್ರೀತಿಸುತ್ತಿದ್ದ. ಪ್ರೇಯಸಿ ಜತೆ ಜಗಳ ಆಗಿ ಬ್ರೇಕಪ್ ಆದ ನಂತರ ಸಿಟ್ಟಿನಲ್ಲಿ ಬಂದು ತನ್ನ ಐಶಾರಾಮಿ ಕಾರಿಗೆ ಬೆಂಕಿ ಇಟ್ಟಿದ್ದಾನೆ.

ಇಬ್ಬರು ಲಾಂಗ್ ಡ್ರೈವ್ ಹೋಗಿದ್ದು, ಕೆರೆ ಬಳಿ ಕಾರ್‌ನಿಂದ ಕೆಳಗಿಳಿದು ಜಗಳ ಆಡಿದ್ದಾರೆ. ಜಗಳದ ನಂತರ ಕಾರಿಗೆ ಬೆಂಕಿ ಹಚ್ಚಿದ್ದಾನೆ. ಖಾಲಿ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಬಂದು ಕಾರ್ ಮೇಲೆ ಸುರಿದಿದ್ದಾನೆ. ಗರ್ಲ್‌ಫ್ರೆಂಡ್ ಕೂಡ ಅಲ್ಲೇ ಇದ್ದು, ಆಕೆ ತಡೆದರೂ ಮಾತು ಕೇಳದ ಕೆವಿನ್ ಬೆಂಕಿ ಹಚ್ಚಿದ್ದಾನೆ. ಸ್ಥಳೀಯರು ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದಾರೆ. ಬರುವಷ್ಟರಲ್ಲಿ ಕಾರು ಸುಟ್ಟು ಕರಕಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!