HEALTH | ವರ್ಷದ ನಂತರವೂ ಎದೆಹಾಲು ಉಣಿಸುವಿಕೆ? ಇದ್ರಿಂದ ಏನೆಲ್ಲಾ ಲಾಭ ?

ಸಾಮಾನ್ಯವಾಗಿ ಎಲ್ಲ ಮಗುವಿಗೂ ಹುಟ್ಟಿದಾಗಿನಿಂದ ಆರು ತಿಂಗಳವರೆಗೂ ಎದೆಹಾಲನ್ನು ಮಾತ್ರ ಕೊಡುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ಆರು ತಿಂಗಳ ನಂತರ ಏಕದಳ ಧಾನ್ಯಗಳ ಆಹಾರ ನೀಡಬಹುದು. ಒಂದು ವರ್ಷದ ನಂತರ ದ್ವಿದಳ ಧಾನ್ಯ ಆಹಾರಗಳನ್ನು ಮಕ್ಕಳಿಗೆ ನೀಡಬಹುದು. ಯಾವುದೇ ರುಚಿಯಾದ ಆಹಾರ ಮಾಡಿಕೊಟ್ಟರೂ ಮಕ್ಕಳಿಗೆ ತಾಯಿಯ ಹಾಲಿಗಿಂತ ಟೇಸ್ಟಿಯಾದ ಆಹಾರ ಮತ್ತೊಂದಿಲ್ಲ. ವರ್ಷದ ನಂತರವೂ ಮಕ್ಕಳಿಗೆ ಹಾಲುಣಿಸುವುದು ಸೂಕ್ತ. ಎರಡು ವರ್ಷಗಳವರೆಗೆ ಹಾಲುಣಿಸಿದರೆ ಮಕ್ಕಳು ಸ್ಟ್ರಾಂಗ್ ಆಗಿರುತ್ತಾರೆ. ಹಾಗೇ ತಾಯಂದಿರಿಗೂ ಯಾವ ಸಮಸ್ಯೆ ಬರೋದಿಲ್ಲ.

ಎರಡು ವರ್ಷದವರೆಗಿನ ಮಕ್ಕಳಿಗೆ ಹಾಲುಣಿಸಿದರೆ ಏನೆಲ್ಲಾ ಲಾಭ?

  • ಹಾಲಿನಲ್ಲಿ ಸಿಗೋ ಪ್ರೋಟೀನ್‌ನಿಂದಾಗಿ ಉತ್ತಮ ಹಾಗೂ ಸ್ಟ್ರಾಂಗ್, ಶೈನಿಯಾದ ಕೂದಲನ್ನು ಹೊಂದುತ್ತಾರೆ.
  • ಮೆದುಳು ಶಾರ್ಪ್ ಆಗುತ್ತದೆ, ಯೋಚನಾ ಶಕ್ತಿ ಹೆಚ್ಚುತ್ತದೆ.
  • ಇವರ ಟೇಸ್ಟ್‌ಬಡ್ಸ್ ಚೆನ್ನಾಗಿರುತ್ತದೆ, ರುಚಿ ರುಚಿಯಾದ ಆಹಾರ ಬಯಸುತ್ತಾರೆ. ಹಾಗೂ ಚೆನ್ನಾಗಿ ಊಟ ಮಾಡುತ್ತಾರೆ.
  • ಇವರ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ರೋಗಗಳಿಗೆ ಇಮ್ಯುನ್ ಆಗಿರುತ್ತಾರೆ.
  • ಇವರು ಕಣ್ಣು ಶಾರ್ಪ್ ಆಗಿರುತ್ತದೆ. ಹಾಲಿನಲ್ಲಿ ಸಿಗುವ ವಿಟಮಿನ್ ಎ ದೃಷ್ಟಿಗೆ ಸಹಕಾರಿ.
  • ಈ ಮಕ್ಕಳ ತೂಕದ ಬಗ್ಗೆ ಹೆಚ್ಚು ವರಿ ಮಾಡೋ ಅವಶ್ಯಕತೆ ಇರೋದಿಲ್ಲ, ಚರ್ಮ ಹಾಗೂ ದೇಹದ ಹೈಡ್ರೇಷನ್ ಚೆನ್ನಾಗಿರುತ್ತದೆ, ಮಕ್ಕಳ ಮೂಳೆಗಳು ಗಟ್ಟಿಯಾಗಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!