Tuesday, February 27, 2024

Ayodhya updates | ರಾಮಭಕ್ತನ ಅಳಿಲು ಸೇವೆ, ಸೀತಾಮಾತೆಗಾಗಿ ಸಿದ್ಧವಾಯ್ತು 196 ಅಡಿ ಉದ್ದದ ರೇಷ್ಮೆ ಸೀರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಡೀ ದೇಶವೇ ಎದುರು ನೋಡುತ್ತಿರುವ ಅಯೋಧ್ಯೆಯ ರಾಮ ಮಂದಿರ ಪ್ರಾಣಪ್ರತಿಷ್ಠಾಪನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ.

ರಾಮಮಂದಿರಕ್ಕೆ ತಮ್ಮ ಕೈಲಾಗುವ ಸಹಾಯವನ್ನು ಭಕ್ತರು ಮಾಡುತ್ತಲೇ ಇದ್ದಾರೆ. ಇಲ್ಲೊಬ್ಬ ನೇಕಾರ ಭಕ್ತ ಸೀತಾಮಾತೆಗಾಗಿ ಬರೋಬ್ಬರಿ 196 ಅಡಿಗಳ ರೇಷ್ಮೆ ಸೀರೆಯನ್ನು ನೇಯ್ದಿದ್ದಾನೆ.

ಹೌದು, ಆಂಧ್ರಪ್ರದೇಶದ ಧರ್ಮಾವರಂ ನಿವಾಸಿ ಜುಜಾರು ನಾಗರಾಜು ಸೀತಾಮಾತೆಗಾಗಿ ಹಸಿರು ಬಣ್ಣದ ರೇಷ್ಮೆ ಸೀರೆ ನೇಯ್ದಿದ್ದಾರೆ. ಸೀರೆ ತುಂಬಾ ಶ್ರೀರಾಮ್ ಎಂದು ಬರೆಯಲಾಗಿದೆ. ಒಂದು ಬಾರಿಯಲ್ಲ, 32 ಸಾವಿರ ಬಾರಿ ವಿಭಿನ್ನ ಭಾಷೆಗಳಲ್ಲಿ ಶ್ರೀರಾಮ್ ಎಂದು ಬರೆದಿದ್ದಾರೆ, ಜೊತೆಗೆ ರಾಮಾಯಣದ ಕೆಲ ಚಿತ್ರಗಳನ್ನು ಚಿತ್ರಿಸಿದ್ದಾರೆ.

ಈ ಬೃಹತ್ ಸೀರೆ 16 ಕೆಜಿಯಷ್ಟು ತೂಕವಿದೆ. 1.5 ಲಕ್ಷ ರೂಪಾಯಿ ಖರ್ಚು ಮಾಡಿ ಸೀರೆ ತಯಾರಿಸಿದ್ದು, ಮಾರುಕಟ್ಟೆಯಲ್ಲಿ ಸೀರೆ ಬೆಲೆ 3.5 ಲಕ್ಷ ರೂಪಾಯಿಗಳಾಗಿದೆ. ತನ್ನ ಜೀವನದ ಉಳಿತಾಯವನ್ನು ಸೀರೆ ಮೇಲೆ ಹಾಕಿ ದೈವಭಕ್ತಿ ಮೆರೆದಿದ್ದಾರೆ ನಾಗರಾಜ್.

ಎರಡು ವರ್ಷದ ಹಿಂದೆ ಸೀರೆ ನೇಯಲು ನಾಗರಾಜು ಆರಂಭಿಸಿದ್ದರು. ಪ್ರತಿ ದಿನ 10  ಗಂಟೆಗಳನ್ನು ಇದಕ್ಕಾಗಿಯೇ ಮೀಸಲಿಡುತ್ತಿದ್ದರು. ದೇವಸ್ಥಾನದ ಸಮಿತಿಗೆ ಸೀರೆ ಸಲ್ಲಬೇಕು, ಟ್ರಸ್ಟ್ ಜೊತೆ ಮಾತನಾಡಿದ್ದೇನೆ. ಒಪ್ಪಿಗೆ ಕೊಟ್ರೆ ಹೋಗ್ತೇನೆ, ಇಲ್ಲವಾದರೆ ಇನ್ನೊಮ್ಮೆ ಹೋಗಿ ಸಮರ್ಪಣೆ ಮಾಡಿ ಬರುತ್ತೇನೆ ಎಂದು ನಾಗರಾಜು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!