Monday, December 11, 2023

Latest Posts

ವರ್ಷದ ನಂತರವೂ ಸ್ತನಪಾನ, ಲಾಭವೇನು? ನಷ್ಟವೇನು?

ಸಾಮಾನ್ಯವಾಗಿ ಆರು ತಿಂಗಳವರೆಗೆ ಮಕ್ಕಳಿಗೆ ಎದೆಹಾಲು ಕುಡಿಸಲಾಗುತ್ತದೆ. ಆರು ತಿಂಗಳವರೆಗೆ ಯಾವುದೇ ಹೊರಗಿನ ಆಹಾರ ಮಗುವಿಗೆ ನೀಡುವುದಿಲ್ಲ, ನೀರನ್ನೂ ಕೊಡುವುದಿಲ್ಲ. ಆದರೆ ಹೆಚ್ಚು ತಾಯಂದಿರುವ ಒಂದು ವರ್ಷದವರೆಗೆ ಮಕ್ಕಳಿಗೆ ಹಾಲುಣಿಸಿ ನಂತರ ನಿಲ್ಲಿಸಿಬಿಡುತ್ತಾರೆ.

ಆದರೆ ಕೆಲವು ತಾಯಂದಿರು ಮಕ್ಕಳಿಗೆ ಎರಡು ವರ್ಷದವರೆಗೂ ಹಾಲು ಕುಡಿಸುತ್ತಾರೆ, ಕೆಲವರು ಎರಡು ವರ್ಷ ದಾಟಿದರೂ ಹಾಲು ಕುಡಿಸುತ್ತಾರೆ. ಈ ರೀತಿ ಮಾಡುವುದರಿಂದ ತಾಯಂದಿರಿಗೆ ರಾತ್ರಿ ಸಂಪೂರ್ಣ ನಿದ್ದೆಯಾಗುವುದಿಲ್ಲ, ಮಕ್ಕಳೂ ಹಾಲು ಕುಡಿಯಲು ಆಗಾಗ ಎದ್ದೇಳುತ್ತಾರೆ.

ಎರಡು ವರ್ಷ ಅಥವಾ ಅದರ ನಂತರವೂ ಹಾಲು ಕುಡಿಸಿದರೆ ಏನು ಲಾಭ?
ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಹಾಲು ಕುಡಿದ ಮಕ್ಕಳಲ್ಲಿ ಇಮ್ಯುನಿಟಿ ಹೆಚ್ಚು, ಹಾಲಿನಲ್ಲಿ ಪೋಷಕಾಂಶಗಳು ಇದ್ದೇ ಇವೆ.

ತಾಯಿಗೂ ಕೂಡ ಹಾಲುಣಿಸುವಿಕೆಯಿಂದ ಲಾಭವಿದೆ, ಹೆಚ್ಚು ಸಮಯ ಹಾಲು ಕುಡಿಸಿದಷ್ಟು ಬ್ರೆಸ್ಟ್ ಕ್ಯಾನ್ಸರ್, ಓವರಿಯನ್ ಕ್ಯಾನ್ಸರ್, ಡಯಾಬಿಟಿಸ್ ಹಾಗೂ ಹೈಬಿಪಿಯಂಥ ಸಮಸ್ಯೆಗಳು ಬರುವುದಿಲ್ಲ.

ಎರಡು ವರ್ಷದ ಅವಧಿಯಲ್ಲಿ ಬರುವ ಸಣ್ಣ ಪುಟ್ಟ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸೋಕೆ ಬೇಕಾದ ವಿಟಮಿನ್ಸ್, ಇಮ್ಯುನಿಟಿ ಬೂಸ್ಟರ‍್ಸ್ ಹಾಲಿನಿಂದ ದೊರಕುತ್ತದೆ.

ಎರಡು ವರ್ಷ ಅಥವಾ ನಂತರ ಹಾಲುಣಿಸುವಿಕೆಯಿಂದ ಏನಿದೆ ತೊಂದರೆ?

ಮಕ್ಕಳಿಗೆ ಹಾಲು ಕುಡಿಯುವುದು, ತಾಯಿಯ ಜೊತೆ ಸಮಯ ಕಳೆಯುವುದು ಅಭ್ಯಾಸ ಆಗಿಬಿಟ್ಟಿರುತ್ತದೆ. ಈಗ ಹಾಲು ಬಿಡಿಸುವುದೇ ಕಷ್ಟದ ಕೆಲಸ.

ಹಾಲು ಬಿಡಿಸಿದ ನಂತರದ ಕೆಲ ದಿನಗಳು ಮಕ್ಕಳಿಗೆ ಮಾನಸಿಕವಾಗಿ, ದೈಹಿಕವಾಗಿ ಚಾಲೆಂಜಿಂಗ್ ಆಗಿರುತ್ತದೆ.

ಬೇರೆ ಆಹಾರದ ಕಡೆ ಗಮನ ಇರುವುದಿಲ್ಲ, ಇಷ್ಟಪಡುವುದಿಲ್ಲ.

ಬೇರೆಯವರೊಂದಿಗೆ ಬೆರೆಯಲು ಇಷ್ಟಪಡುವುದಿಲ್ಲ, ತಾಯಿಯನ್ನು ಬಿಟ್ಟು ಇನ್ಯಾರ ಜೊತೆಗೂ ಹೊಂದಾಣಿಕೆ ಆಗೋದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!