ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ಲಡ್ಡು ವಿವಾದ ಸದ್ಯಕೋರ್ಟ್ ಅಂಗಳದಲ್ಲಿದೆ. ಇತ್ತ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹೋರಾಟವನ್ನೇ ನಡೆಸುತ್ತಿದ್ದಾರೆ.
ಲಡ್ಡು ಪ್ರಸಾದಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಕೆ ಆರೋಪದ ಬಳಿಕ ದೇಗುಲವನ್ನು ಪವನ್ ಕಲ್ಯಾಣ್ ಶುದ್ಧೀಕರಣಗೊಳಿಸಿದ್ದರು. ಇದೀಗ ವೃತ ಕೈಗೊಂಡಿದ್ದ ಪವನ್ ಕಲ್ಯಾಣ್ ಇಂದು ಬರಿಗಾಲಲ್ಲಿ ತಿರುಪತಿ ಬೆಟ್ಟ ಹತ್ತಿದ್ದಾರೆ.
ಬೆಟ್ಟ ಹತ್ತುವಾಗ ಪವನ್ ಕಲ್ಯಾಣ್ ಉಸಿರಾಟ ಸಮಸ್ಯೆಯಿಂದ ಅಸ್ವಸ್ಥಗೊಂಡರು. ಕೆಲ ಹೊತ್ತಿನ ಬಳಿಕ ಚೇತರಿಸಿಕೊಂಡ ಪವನ್ ಕಲ್ಯಾಣ್ ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಿದ್ದಾರೆ.
ಬರೋಬ್ಬರಿ 3,500 ಮೆಟ್ಟಿಲುಗಳ ತಿರುಪತಿ ಬೆಟ್ಟವನ್ನು ಪವನ್ ಕಲ್ಯಾಣ್ ಹತ್ತಲು ಆರಂಭಿಸಿದ್ದಾರೆ. ಸಾವಿರ ಮೆಟ್ಟಿಲು ಪೂರ್ಣಗೊಳ್ಳುತ್ತಿದ್ದಂತೆ ಪವನ್ ಕಲ್ಯಾಣ್ ಬಳಲಿದ್ದಾರೆ. ಆದರೆ ಕಾಲ್ನಡಿಗೆಯಲ್ಲಿ ತಿರುಪತಿ ಬೆಟ್ಟ ಹತ್ತುವ ಅಚಲ ನಿರ್ಧಾರದ ಕಾರಣ ಪವನ್ ಕಲ್ಯಾಣ್ ಬೆಟ್ಟ ಹತ್ತುವ ಪ್ರಯತ್ನ ಮುಂದುವರಿಸಿದ್ದಾರೆ.
https://x.com/gudivaka_seshu/status/1841089263435464946
ತೀವ್ರ ಸುಸ್ತಾದ ಪವನ್ ಕಲ್ಯಾಣ್ ಉಸಿರಾಟದ ಸಮಸ್ಯೆಯಿಂದ ಬಳಲಿದ್ದಾರೆ. ಹೀಗಾಗಿ ಮೆಟ್ಟಿಲುಗಳಲ್ಲೇ ಕುಸಿದ ಪವನ್ ಕಲ್ಯಾಣ್‌ಗೆ ನೀರು ನೀಡಲಾಯಿತು. ಕೆಲ ಹೊತ್ತು ವಿಶ್ರಾಂತಿ ಪಡೆಯಲು ಸೂಚಿಸಲಾಯಿತು. ಉಪಮುಖ್ಯಮಂತ್ರಿ ಪವನ್ ಕಲ್ಯಾಣ್‌ಗೆ ಅಸ್ತಮಾ ಹಾಗೂ ಬೆನ್ನು ನೋವಿನ ಸಮಸ್ಯೆ ಇದೆ ಅನ್ನೋ ಮಾತುಗಳು ಕೇಳಿಬಂದಿದೆ.
ಕೆಲ ಹೊತ್ತಿನ ವಿಶ್ರಾಂತಿಯಿಂದ ಪವನ್ ಕಲ್ಯಾಣ್ ಚೇತರಿಸಿಕೊಂಡಿದ್ದಾರೆ. ಬಳಿಕ ಕಾಲ್ನಡಿಗೆಯಲ್ಲೇ ತಿರುಪತಿ ಬೆಟ್ಟ ಹತ್ತಿ, ದೇವರ ದರುಶನ ಪಡೆದಿದ್ದಾರೆ. ಇದೇ ವೇಳೆ ತಿರುಪತಿ ಭಕ್ತರು ಜಯಘೋಷ ಮೊಳಗಿಸಿದ್ದಾರೆ.