ಹೊಸದಿಗಂತ ಡಿಜಿಟಲ್ ಡೆಸ್ಕ್
ರಷ್ಯಾ-ಉಕ್ರೇನ್ ನಡುವೆ ಕದನ ಮುಂದುವರೆದಿದ್ದು, ರಷ್ಯಾ ಸೇನೆ ನಡೆಸಿದ ಗುಂಡಿನ ದಾಳಿಗೆ ಸಿಲುಕಿ ಉಕ್ರೇನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕದ ವರದಿಗಾರರೊಬ್ಬರು ಮೃತಪಟ್ಟಿದ್ದಾರೆ. ಬ್ರೆಂಟ್ ರೆನಾಡ್ ಸಾವನ್ನಪ್ಪಿದ ಪತ್ರಕರ್ತ. ಇರ್ಪಿನ್ ಪ್ರದೇಶದಲ್ಲಿ ರಷ್ಯಾದ ಪಡೆಗಳು ನಡೆಸಿದ ದಾಳಿಗೆ ರೆನಾಡ್ ದುರ್ಮರಣವನ್ನಪ್ಪಿದ್ದಾರೆ. ಇನ್ನೊಬ್ಬ ಪತ್ರಕರ್ತ ಗಾಯಗೊಂಡಿದ್ದಾರೆ ಎಂದು ಕೀವ್ ಪ್ರದೇಶದ ಪೊಲೀಸ್ ಮುಖ್ಯಸ್ಥ ಆಂಡ್ರಿ ನೆಬಿಟೋವ್ ಮಾಹಿತಿ ನೀಡಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ವರದಿಗಾರರಾಗಿ ಉಕ್ರೇನ್ ಕಾರ್ಯನಿರ್ವಹಿಸುತ್ತಿದ್ದರು.
ಉಕ್ರೇನ್‌ನಲ್ಲಿ ರಷ್ಯಾದ ಸೈನಿಕರ ದೌರ್ಜನ್ಯದ ಬಗ್ಗೆ ಸತ್ಯವನ್ನು ತೋರಿಸಲು ಪ್ರಯತ್ನಿಸುವ ಅಂತರರಾಷ್ಟ್ರೀಯ ಮಾಧ್ಯಮದ ಪತ್ರಕರ್ತರನ್ನು ರಷ್ಯಾ ಸೈನಿಕರು ಕೊಲ್ಲುತ್ತಿದ್ದಾರೆ ಎಂದು ನೆಬಿಟೋವ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.