ರೊಹಿಂಗ್ಯ ಮುಸ್ಲಿಮರನ್ನು ಭಾರತದೊಳಗೆ ತರುತ್ತಿದ್ದ ಜಾಲ ಬೇಧಿಸಿದ ಎನ್ ಐ ಎ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ರೊಹಿಂಗ್ಯ ಮುಸ್ಲಿಮರನ್ನು ಭಾರತದೊಳಕ್ಕೆ ತಂದುಬಿಡುತ್ತಿದ್ದ ಜಾಲವೊಂದರ ಆರು ಮಂದಿಯನ್ನು ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) ಹೇಳಿದೆ.

ಈ ಜಾಲವು ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಮೇಘಾಲಯಗಳ ಗಡಿ ಭಾಗಗಳಲ್ಲಿ ಸಕ್ರಿಯವಾಗಿತ್ತು.

ಮ್ಯಾನ್ಮಾರ್ ನಿಂದ ಹೊರಹಾಕಿಸಿಕೊಂಡ ರೊಹಿಂಗ್ಯ ಮುಸ್ಲಿಮರನ್ನು ವಿಶ್ವಸಂಸ್ಥೆಯೇನೋ ಜಗತ್ತಿನ ಅತಿ ಪೀಡಿತ ನಿರಾಶ್ರಿತರು ಎಂದು ಹೇಳಿದೆ. ಮಾಧ್ಯಮದ ಒಂದು ವರ್ಗವೂ ಭಾರತವು ಇವರಿಗೆಲ್ಲ ಮಾನವೀಯ ನೆಲೆಯಲ್ಲಿ ಆಶ್ರಯ ಕೊಡಬೇಕು ಎಂದು ಉಪದೇಶವನ್ನೂ ನೀಡುತ್ತಿದೆ. ಆದರೆ ರೋಹಿಂಗ್ಯ ಮುಸ್ಲಿಮರು ಮ್ಯಾನ್ಮಾರ್ ನಿಂದ ಹೊರಬೀಳುವ ಪರಿಸ್ಥಿತಿ ಉದ್ಭವವಾಗಿರುವುದೇ ಅವರು ಅಲ್ಲಿನ ಸ್ಥಳೀಯ ಬೌದ್ಧ ಜನಸಂಖ್ಯೆಯನ್ನು ಇಸ್ಲಾಮಿಗೆ ಮತಾಂತರ ಮಾಡುವುದಕ್ಕೆ ಹೋದ ಹಿನ್ನೆಲೆಯಲ್ಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!