ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀ ಎಂದರೆ ಶುಂಠಿ ಟೀ, ಏಲಕ್ಕಿ ಟೀ, ಮಸಾಲಾ ಟೀ, ಗ್ರೀನ್ ಟೀ, ಲೆಮನ್ ಟೀ, ರೋಸ್ ಟೀ, ತುಳಸಿ ಟೀ, ಬಾದಾಮಿ ಟೀ ಹೀಗೆ ನೂರಾರು ವೆರೈಟಿಗಳು. ಬೆಳಿಗ್ಗೆ ಎದ್ದಾಗ ಒಂದು ಲೋಟ ಚಹಾ ಗಂಟಲಿಗೆ ಇಳಿದರೆ ಮಾತ್ರ ಮನಸ್ಸು ನಿರಾಳವಾಗುವುದು. ಈ ತರಹದ ಹಲವಾರು ಟೀಗಳ ಬಗ್ಗೆ ಕೇಳಿದ್ದೇವೆ.. ಬಹುಶಃ ಈಗ ವಿಡಿಯೋದಲ್ಲಿರುವ ಚಹಾದ ಬಗ್ಗೆ ಯಾರೂ ಕೇಳಿಲ್ಲ ಅನಿಸುತ್ತೆ..
ಯೂಟ್ಯೂಬರ್ ಮಾಡುವ ಈ ವಿಚಿತ್ರ ಟೀ ಬಗ್ಗೆ ತಿಳಿದರೆ ಬೆಚ್ಚಿ ಬೀಳುತ್ತೀರಿ. ಈ ಟೀ ಕುಡಿಯೋದು ಬಿಡಿ, ಮಾಡೋದು ನೋಡಿದ್ರೆ ವಾಂತಿ ಬರುತ್ತೆ. ಇದು ‘ಎಗ್ ಟೀ’ ಅಂತೆ ಅನೇಕರು ಕೇಳಿರಲಿಕ್ಕಿಲ್ಲ..!! ಹಸಿ ಮೊಟ್ಟೆಯಿಂದ ಟೀ ಮಾಡೋದನ್ನು ನೋಡಿ ನೆಟ್ಟಿಗರು ಗರಂ ಆಗಿದ್ದಾರೆ.
ಈ ‘ಎಗ್ ಟೀ’ ತಯಾರಿಸಲು ಸ್ತ್ರೀ ಯೂಟ್ಯೂಬರ್‌ನ ಪಾಕವಿಧಾನಗಳು ನಿಜವಾಗಿಯೂ ವಾಕರಿಕೆ ತರುತ್ತವೆ. ಈ ಟೀಯಲ್ಲಿ ಯೂಟ್ಯೂಬರ್ ಸೇಬಿನ ತುಂಡುಗಳನ್ನೂ ಹಾಕಿದ್ದಾರೆ. ನಾವು ಹೇಳೋದಕ್ಕಿಂತ ನೀವು ನೋಡಿದರೆ ಇನ್ನೂ ಚೆನ್ನಾಗಿ ಅರ್ಥವಾಗುತ್ತದೆ. ಒಮ್ಮೆ ನೋಡಿಬಿಡಿ.
https://www.facebook.com/watch/?v=644757327723591