Sunday, December 3, 2023

Latest Posts

ಹಮಾಸ್​ ಉಗ್ರರ ವಶದಿಂದ ಗಾಜಾ ಗಡಿ ಇಸ್ರೇಲ್ ವಶಕ್ಕೆ​, ಸಂಘರ್ಷದಲ್ಲಿ 3 ಸಾವಿರ ಮಂದಿ ಮೃತ್ಯು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಯುದ್ಧವು ದಿನೇದಿನೇ ತಾರಕಕ್ಕೇರಿದೆ. ಈ ಸಂಘರ್ಷದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹಮಾಸ್‌ ಉಗ್ರರಿಗೆ ತಿರುಗೇಟು ನೀಡಲು ಸಜ್ಜಾಗಿರುವ ಇಸ್ರೇಲ್‌ ಇದೀಗ ಗಾಜಾಪಟ್ಟಿಯನ್ನು ವಶಪಡಿಸಿಕೊಂಡಿರುವುದಾಗಿ ಘೋಷಿಸಿದೆ.

ರಾತ್ರೋರಾತ್ರಿ ಇಸ್ರೇಲ್‌ನ ಯುದ್ಧವಿಮಾನಗಳು ಗಾಜಾಪಟ್ಟಿ ಮೇಲೆ ದಾಳಿ ಮಾಡಿದ್ದು, ಇಡೀ ಗಾಜಾ ಗಡಿಯನ್ನು ವಶಪಡಿಸಿಕೊಂಡಿದ್ದೇವೆ ಎಂದು ಇಸ್ರೇಲ್‌ ತಿಳಿಸಿದೆ.

ಗಾಜಾ ಪಟ್ಟಿಯ ವಿವಿಧ ಭಾಗಗಳ ಮೇಲೆ ಇಸ್ರೇಲ್‌ ವಾಯುಪಡೆ ನಿರಂತರ ವೈಮಾನಿಕ ದಾಳಿ ನಡೆಸಿದ್ದು, ಗಾಜಾ ಗಾಡಿಯಲ್ಲಿ ತನ್ನ ಸೇನಾ ವಾಹನಗಳನ್ನೇ ತಡೆಗೋಡೆಯಂತೆ ನಿಲ್ಲಿಸಿದೆ. ನುಸುಳುಕೋರರನ್ನು ಹೊಡೆದುರುಳಿಸಲು ಸನ್ನದ್ಧವಾಗಿದೆ ಎಂದು ಇಸ್ರೇಲ್ ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!