ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಲಂಚ: ಪ್ರಸೂತಿ ತಜ್ಞ ಅಮಾನತು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಲಂಚ ಪಡೆದ ಪ್ರಸೂತಿ ತಜ್ಞ ಡಾ.ರಾಮಚಂದ್ರ ಅವರನ್ನು ಅಮಾನತುಗೊಳಿಸಿ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಆದೇಶ ಹೊರಡಿಸಿದ್ದಾರೆ.

ಯಲಹಂಕ ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆ ಮಾಡಿಸಲು ಮಂಜುಳಾ ಎಂಬ ಮಹಿಳೆಗೆ ಸಿಸೇರಿಯನ್​ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಆರೋಪ ಮಾಡಲಾಗಿದೆ.

ಲೋಕಾಯುಕ್ತರ ತನಿಖೆಯಲ್ಲಿ 10 ಸಾವಿರ ಹಣ ಪಡೆದಿರುವುದು ಸಾಬೀತಾಗಿದೆ. ಹಾಗಾಗಿ ಲೋಕಾಯುಕ್ತರ ತನಿಖೆ ಆಧರಿಸಿ ವೈದ್ಯ ಡಾ.ರಾಮಚಂದ್ರ ಅವರನ್ನು ಅಮಾನತು ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!