‘ಅಜಿತ್ ಪವಾರ್ ಪಾಳಯ’ಕ್ಕೆ ನಾಗಾಲ್ಯಾಂಡ್’ನ 7 ಶಾಸಕರ ಬೆಂಬಲ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದಲ್ಲಿ ಬಿರುಕು ಮೂಡಿದ ಬಳಿಕ ಶರದ್ ಪವಾರ್ ಮತ್ತೊಂದು ಹಿನ್ನಡೆ ಅನುಭವಿಸಿದ್ದಾರೆ. ನಾಗಾಲ್ಯಾಂಡ್ ನಲ್ಲಿ 7 ಎನ್ಸಿಪಿ ಶಾಸಕರು ಅಜಿತ್ ಪವಾರ್ ಶಿಬಿರಕ್ಕೆ ತೆರಳಿದ್ದಾರೆ. ಶಾಸಕರ ಜತೆಗೆ ಪದಾಧಿಕಾರಿಗಳೂ ಅಜಿತ್ ಪವಾರ್ ಅವರನ್ನು ಬೆಂಬಲಿಸಲಿದ್ದಾರೆ.

ನಾಗಾಲ್ಯಾಂಡ್ ರಾಜ್ಯಾಧ್ಯಕ್ಷ ವಂತುಂಗ್ ಓಡಿಯೊ ಅವರು ದೆಹಲಿಗೆ ಬಂದು ರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಮತ್ತು ಮಹಾರಾಷ್ಟ್ರ ಅಧ್ಯಕ್ಷ ಸುನಿಲ್ ತತ್ಕರೆ ಅವರನ್ನು ಭೇಟಿಯಾಗಿದ್ದಾರೆ ಎಂದು ಎನ್ಸಿಪಿ ಅಜಿತ್ ಪವಾರ್ ಬಣದ ರಾಷ್ಟ್ರೀಯ ವಕ್ತಾರ ಬ್ರಜ್ಮೋಹನ್ ಶ್ರೀವಾಸ್ತವ ತಿಳಿಸಿದ್ದಾರೆ.

ನಾಗಾಲ್ಯಾಂಡ್ ಎನ್ಸಿಪಿಯ ನಿರ್ಧಾರದ ಬಗ್ಗೆ ಅವರು ಮಾಹಿತಿ ನೀಡಿದರು. ಒಡಿಯೊ ಅವರು 7 ಶಾಸಕರು ಸೇರಿದಂತೆ ಎಲ್ಲಾ ಪದಾಧಿಕಾರಿಗಳಿಗೆ ಬೆಂಬಲದ ಅಫಿದಾವಿತ್ ಗಳನ್ನು ಹಸ್ತಾಂತರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!