Sunday, October 1, 2023

Latest Posts

SHOCKING VIDEO| ಏನೋ ಮಾಡಲು ಹೋಗಿ ಮತ್ತೇನೋ ಆಯ್ತಂತೆ..ನವವಧು ಜಸ್ಟ್‌ ಮಿಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚಿನ ದಿನಗಳಲ್ಲಿ ಫೋಟೋಶೂಟ್ ಇಲ್ಲದೆ ಯಾವುದೇ ಮದುವೆ ನಡೆಯೋದೇ ಇಲ್ಲ ಎನ್ನುವಂತಾಗಿದೆ. ವಧು-ವರರು ವಿಭಿನ್ನ ಸ್ಟೈಲ್‌, ವಿಭಿನ್ನ ಪ್ರದೇಶಗಳಲ್ಲಿ ಫೋಟೋಗೆ ಪೋಸ್‌ ಕೊಡುತ್ತಾರೆ. ಕೆಲವೊಮ್ಮೆ ಈ ಫೋಟೋ ಶೂಟ್‌ ಪ್ರಾಣಕ್ಕೆ ಸಂಚಕಾರವೂ ತಂದೊಡ್ಡಿರುವ ಪ್ರಕರಣಗಳೂ ನಡೆದಿವೆ. ಇಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಧು ನೀರಿಗೆ ಜಿಗಿಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅದಾಗಲೇ ವರನು ನೀರಿನೊಳಗೆ ಇದ್ದ. ವಧು ನೀರಿಗೆ ಬೀಳುವಾಗ ವರ ಆಕೆಯನ್ನು ಹಿಎಯುವ ಭಂಗಿಯಲ್ಲಿ ಪೋಸ್‌ ಕೊಡಲು ಹೋಗಿ ಮತ್ತೇನೋ ಆಗಿದೆ. ವಧು ಧರಿಸಿದ್ದ ಬಟ್ಟೆ ಆಕೆ ಮುಳುಗುತ್ತಿದ್ದಂತೆ ಮುಖದ ಸುತ್ತ ಆವರಿಸಿದೆ. ಉಸಿರಾಡಲು ಕಷ್ಟವಾಗದೆ ವಧು ಪರದಾಡಿರುವ ದೃಶ್ಯ ನಡುಗಿಸುವಂತಿದೆ. ವರನು ಗೌನ್ ತೆಗೆಯಲು ಪ್ರಯತ್ನಿಸಿದರೂ ಬಾರದಷ್ಟು ಗಟ್ಟಿಯಾಗಿ ಸುತ್ತಿಕೊಂಡಿತ್ತು. ಮೂರ್ನಾಲ್ಕು ಜನ ಸೇರಿ ಬಹಳ ಕಷ್ಟಪಟ್ಟು ಆಕೆಯ ಪ್ರಾಣ ಉಳಿಸಿದ್ದಾರೆ.

ಈ ಸೆನ್ಸೇಷನಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ @NoCapFights ಐಡಿಯೊಂದಿಗೆ ಹಂಚಿಕೊಳ್ಳಲಾಗಿದೆ. ಕೇವಲ 43 ಸೆಕೆಂಡ್ ಗಳ ಈ ವಿಡಿಯೋವನ್ನು ಇದುವರೆಗೆ 3 ಲಕ್ಷ 33 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 3 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿ ಕಾಮೆಂಟ್ಸ್ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!