ಬೆಳಗಾದರೆ ವಿವಾಹವಾಗಬೇಕಿದ್ದ ವಧು ಅಗ್ನಿ ಅವಘಡದಲ್ಲಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಳಗಾದರೆ ವಿಹಾವಾಗಬೇಕಿದ್ದ ವಧು ಅಗ್ನಿ ಅವಘಡದಲ್ಲಿ ಮೃತಪಟ್ಟ ಘಟನೆ ಅಮೆರಿಕದ ವಿಸ್ಕಾನ್ಸಿನ್‌ನಲ್ಲಿ ನಡೆದಿದೆ.

ಅಗ್ನಿ ಅವಘಡದಲ್ಲಿ 19 ವರ್ಷದ ಯುವತಿ ಪೈಜ್ ರಡ್ಡಿ ಮೃತಪಟ್ಟಿದ್ದಾಳೆ. ಮೇ 23 ರಂದು ಬೆಳಗಿನ ಜಾವ ಸುಮಾರು 4 ಗಂಟೆಯ ವೇಳೆಗೆ ರೀಡ್ಸ್​ಬರ್ಗ್​ ಮನೆಯ ಎರಡನೇ ಮಹಡಿಯಲ್ಲಿ ಯುವತಿ ನಿದ್ರಿಸುತ್ತಿದ್ದಳು. ಹೊಗೆಯಿಂದಾಗಿ ಉಸಿರುಗಟ್ಟಿ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಬಳಿಕ ಸಾವನ್ನಪ್ಪಿದ್ದಾಳೆ.

ಮರುದಿನ ಬೆಳಗ್ಗೆಯೇ ಆಪ್ತರು, ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗುವವರಿದ್ದರು. ಘಟನೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ, ಆ ಮನೆ ವರನ ಅಜ್ಜಿಗೆ ಸೇರಿದ್ದು ಎಂದು ತಿಳಿದುಬಂದಿದೆ.

ಬೆಳಗ್ಗೆ ಅಗ್ನಿಶಾಮಕ ದಳ ಆಗಮಿಸುವಷ್ಟರಲ್ಲಿ ಮನೆಯ ತುಂಬಾದ ಬೆಂಕಿ ಆವರಿಸಿತ್ತು. ಮನೆಯೊಳಗಿದ್ದ ಮೂವರ ಆರೋಗ್ಯವೂ ಹದಗೆಟ್ಟಿದೆ. ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದ ಕಾರಣ ಎಷ್ಟೇ ಕಿರುಚಾಡಿದರೂ ಆಕೆಯನ್ನು ರಕ್ಷಿಸುವಲ್ಲಿ ಸೋತರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!