ಐತಲಕ್ಕಡಿ…ಹಿಂಗೂ ಮದುವೆ ಮಾಡ್ತಾರಾ..? ಪ್ರಕಾಶಂ ಜಿಲ್ಲೆಯಲ್ಲೊಂದು ವಿಚಿತ್ರ ಆಚರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾಗರೀಕತೆ ಎಷ್ಟೇ ಬೆಳೆದರೂ..ವಂಶ ಮತ್ತು ಅವರ ಆಚರಣೆಗಳನ್ನು ಮಾತ್ರ ಜನ ಇಂದಿಗೂ ಪಾಲಿಸುತ್ತಿದ್ದಾರೆ ಎಂಬುದಕ್ಕೆ ಈ ಘಟನೆಯೇ ನಿದರ್ಶನ. ಮದುಮಗಳಂತೆ ಸಿಂಗಾರಗೊಂಡ ಮದುಮಗನನ್ನು ಭಾಜಾ-ಭಜಂತ್ರಿಗಳೊಂದಿಗೆ ಮೆರವಣಿಗೆ ಮೂಲಕ ತಮ್ಮ ಕುಲದೈವಕ್ಕೆ ಹರಕೆ ತೀರಿಸುವ ಪದ್ದತಿಯನ್ನು ಈಗಲೂ ರೂಢಿಸಿಕೊಂಡಿದ್ದಾರೆ.

ಈ ಆಚರಣೆ ನೆರೆ ರಾಜ್ಯ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕೊಂಕಣಮಿಟ್ಲ ಮಂಡಲದ ಗೊಟ್ಲಗಟ್ಟು ಗ್ರಾಮದಲ್ಲಿ ನಡೆದಿದೆ. ಅಲ್ಲಿನ ರಾಮಯ್ಯ ಅವರ ಪುತ್ರ ಯೋಗೇಂದ್ರ ಬಾಬು ಅವರಿಗೆ ವಿವಾಹ ನಿಶ್ಚರ್ಯವಾದ್ದರಿಂದ ಮದುಮಗನಿಗೆ ಪ್ಯಾಂಟ್ ಶರ್ಟ್ ಬದಲಿಗೆ ಸೀರೆ, ರವಿಕೆ, ವಿಗ್ ಮತ್ತು ಹೂ, ಒಡವೆಗಳಿಂದ ಅಲಂಕರಿಸುತ್ತಾರೆ. ನಂತರ ಮೆರವಣಿಗೆ ಮೂಲಕ ಮನೆದೇವರು ಗುರಪ್ಪ ಸ್ವಾಮಿಗೆ ಹರಕೆಯನ್ನು ಅರ್ಪಿಸಿದರು. ಅವರ ಆಚರಣೆಗಳಲ್ಲಿ ವಧುವನ್ನು ವರನಂತೆ ಮತ್ತು ವರನನ್ನು ವಧುವಿನಂತೆ ಅಲಂಕರಿಸುತ್ತಾರೆ.

ಅನಾದಿ ಕಾಲದಿಂದಲೂ ಆಚರಿಸುತ್ತಿರುವ ಈ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಬರುತ್ತಿರುವುದಾಗಿ ವರನ ಕುಟುಂಬಸ್ಥರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!