ಪಾಂಗಾಂಗ್ ಸರೋವರದ ಬದಿಯಲ್ಲಿ ಚೀನಾದಿಂದ ಸೇತುವೆ ನಿರ್ಮಾಣ: ಚಿತ್ರ ಸೆರೆಹಿಡಿದ ಉಪಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರದ ಬದಿಯಲ್ಲಿ ಚೀನಾ ಸೇತುವೆಯನ್ನು ನಿರ್ಮಿಸುತ್ತಿದೆ.
ಹೌದು, ಉಪಗ್ರಹವೊಂದು ಸೆರೆ ಹಿಡಿದಿರುವ ಚಿತ್ರದಲ್ಲಿ ಈ ಸೇತುವೆ ಕಾಣುತ್ತದೆ.
ಜಿಯೋ ಇಂಟೆಲಿಜೆನ್ಸ್ ತಜ್ಞ ಡೇಮಿಯನ್ ಸೈಮನ್ಸ್ ಈ ಬಗ್ಗೆ ಮಾಹಿತಿ ನೀಡಿದ್ದು, ಪಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಗಳನ್ನು ಸಂಪರ್ಕಿಸಲು ಚೀನಾ ಹೊಸ ಸೇತುವೆ ನಿರ್ಮಿಸುತ್ತಿದೆ ಎಂದಿದ್ದಾರೆ.
ನಿರ್ಮಾಣ ಹಂತದ ಸೇತುವೆ ಚಿತ್ರವನ್ನು ಉಪಗ್ರಹ ಸೆರೆಹಿಡಿದಿದೆ ಎಂದಿದ್ದಾರೆ.

ಉಪಗ್ರಹ ಸೆರೆಹಿಡಿದಿರುವ ಚಿತ್ರದ ಪ್ರದೇಶ ಗಾಲ್ವಾನ್ ಕಣಿವೆ ಸಮೀಪದ ವಾಸ್ತವ ಗಡಿ ನಿಯಂತ್ರಣ ರೇಖೆಯ ಚೀನಾದ ಭಾಗದಲ್ಲಿದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!