ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಲ್ಲಿ ನಿನ್ನೆ ಒಂದೇ ದಿನ 10 ಲಕ್ಷಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ದಾಖಲಾಗಿವೆ.
ಮೊದಲನೇ ಮತ್ತು ಎರಡನೇ ಅಲೆಗಿಂತ ಮೂರು ಪಟ್ಟು ವೇಗವಾಗಿ ಅಮೆರಿಕದಲ್ಲಿ ಒಮಿಕ್ರಾನ್ ಹಬ್ಬುತ್ತಿದೆ.
ಕಳೆದ ವಾರದಲ್ಲಿ ಅಮೆರಿಕದ ಪ್ರತಿ 100 ಮಂದಿಯಲ್ಲಿ ಒಬ್ಬರಿಗೆ ಸೋಂಕು ಕಂಡುಬಂದಿದೆ.
ಒಮಿಕ್ರಾನ್ ಏಕಾಏಕಿ ಹೆಚ್ಚಳ ಹಿನ್ನೆಲೆಯಲ್ಲಿ ಇಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಶ್ವೇತಭವನದ ಕೊರೋನಾ ವೈರಸ್ ನಿರ್ವಹಣಾ ತಂಡವನ್ನು ಭೇಟಿ ಮಾಡಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಲಿದ್ದಾರೆ. ಭಾನುವಾರ 5 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿತ್ತು. ಒಂದು ದಿನದಲ್ಲೇ ಈ ಸಂಖ್ಯೆ ದ್ವಿಗುಣವಾಗಿದ್ದು, ಅಮೆರಿಕನ್ನರಲ್ಲಿ ಭೀತಿ ಹೆಚ್ಚಾಗಿದೆ.