ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತಿನ ಮೊರ್ಬಿಯಲ್ಲಿ ಸೇತುವೆ ದುರಂತದಲ್ಲಿ 141 ಜನರು ಸಾವನ್ನಪ್ಪಿದ್ದು, ಸೇತುವೆಯನ್ನು ನವೀಕರಿಸಿದ ಒರೆವಾ ಕಂಪನಿಯ ಅಧಿಕಾರಿಗಳು ಸೇರಿದಂತೆ ಒಂಬತ್ತು ಜನರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಕೆಲವರು ಒರೆವಾದ ಮಧ್ಯಮ ಮಟ್ಟದ ಉದ್ಯೋಗಿಗಳಾಗಿದ್ದು, ಬಹು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದೆ ದುರಂತಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ.
ಇನ್ನು ಸೇತುವೆ ದುರಂತದ ನಂತರ ಕಂಪನಿಯ ಹಿರಿಯ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಓರೆವಾ ನಾಗರಿಕ ಸಂಸ್ಥೆಯಿಂದ ಫಿಟ್‌ನೆಸ್ ಪ್ರಮಾಣಪತ್ರವನ್ನು ತೆಗೆದುಕೊಳ್ಳದೆ ನಿಗದಿತ ಸಮಯಕ್ಕಿಂತ ಮೊದಲು ಸೇತುವೆಯನ್ನು ತೆರೆದರು ಎನ್ನಲಾಗುತ್ತಿದೆ.
ಮಾರ್ಚ್‌ನಲ್ಲಿ ಐತಿಹಾಸಿಕ ಸೇತುವೆಯ ದುರಸ್ತಿ ಕಾರ್ಯಕ್ಕಾಗಿ ಕಂಪನಿಯನ್ನು ನೇಮಿಸಲಾಯಿತು. ಏಳು ತಿಂಗಳ ನಂತರ ಅಕ್ಟೋಬರ್ 26 ರಂದು ಗುಜರಾತಿ ಹೊಸ ವರ್ಷವನ್ನು ಆಚರಿಸಿದಾಗ ಸೇತುವೆಯನ್ನು ಸಾರ್ವಜನಿಕರಿಗೆ ತೆರೆಯಲಾಯಿತು.